ಮೋದಿಗೆ ಮತ ಹಾಕದಿರಿ ಜನರಿಗೆ 'ಬುದ್ಧಿ'ಮಾತು!

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರೆತ್ತಿದರೆ ಕೆಂಡ ಕಾರುವ 'ಬುದ್ಧಿ'ಜೀವಿಗಳು, ಈಗ ಬಿಜೆಪಿ ಮತ್ತು ಮೋದಿ ಅವರನ್ನು ಬೆಂಬಲಿಸದಂತೆ ಜನರಿಗೆ ಮನವಿ ಮಾಡಿದ್ದಾರೆ.
ಮೋದಿ ಅವರು ದೇಶದಲ್ಲಿ ಕೋಮುದ್ವೇಷವನ್ನು ಹರಡಿ ಅಧಿಕಾರದ ಗದ್ದುಗೆಯೇರಲು ಹವಣಿಸುತ್ತಿದ್ದಾರೆ. ಅಂಥವರನ್ನು ದೂರವಿಡಿ ಎಂಬ ಜಂಟಿ ಹೇಳಿಕೆಯನ್ನು ಶೈಕ್ಷಣಿಕ ತಜ್ಞರು, ಕಲಾವಿದರು, ಸಾಂಸ್ಕೃತಿಕ ಹಾಗೂ ಸಾಹಿತ್ಯ ದಿಗ್ಗಜರನ್ನೊಳಗೊಂಡ ಗುಂಪೊಂದು ಗುರುವಾರ ಬಿಡುಗಡೆ ಮಾಡಿದೆ. ಇವರಲ್ಲಿ ಗಿರೀಶ್ ಕಾರ್ನಾಡ್, ರೊಮೀಳಾ ಥಾಪರ್, ಪ್ರಭಾತ್ ಪಟ್ನಾಯಕ್, ಕುಮಾರ್ ಸಹಾನಿ, ಸಯೀದ್ ಮಿರ್ಜಾ, ಅನುರಾಧಾ ಕಪೂರ್, ವಿವನ್ ಸುಂದರಂ, ಡಿ.ಎನ್. ಝಾ ಮತ್ತಿತರರು ಸೇರಿದ್ದಾರೆ.
ಫ್ಯಾಸಿಸ್ಟ್ ಶಕ್ತಿಗಳು: ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಇತ್ತೀಚೆಗಷ್ಟೇ ಮಾತನಾಡಿದ್ದ ಮೋದಿ ಅವರು, ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಬಾಂಗ್ಲಾ ನುಸುಳುಕೋರರನ್ನು ಮೊದಲು ಇಲ್ಲಿಂದ ಓಡಿಸಬೇಕು ಎಂದಿದ್ದಾರೆ. ಇಂತಹ ವಲಸಿಗರಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ಕೈತಪ್ಪುತ್ತಿದೆ ಎಂಬ ಕಾರಣವನ್ನೂ ಅವರು ನೀಡಿದ್ದಾರೆ. ಯುರೋಪ್ನ ರೇಸಿಸ್ಟ್ ಹಾಗೂ ಫ್ಯಾಸಿಸ್ಟ್ಗಳೂ ಇಂತಹ ಕಾರಣಗಳನ್ನೇ ನೀಡುತ್ತಾರೆ. ಭಾರತದಿಂದಲೂ ಅನೇಕರು ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೆ. ಅವರೊಂದಿಗೂ ಆ ದೇಶಗಳು ಇದೇ ರೀತಿ ವರ್ತಿಸಿದರೆ ನಾವು ಖಂಡಿಸುವುದಿಲ್ಲವೇ ಎಂದೂ ಪ್ರಶ್ನಿಸಿದ್ದಾರೆ ಬುದ್ಧಿಜೀವಿಗಳು. ಒಟ್ಟಾರೆಯಾಗಿ ಮೋದಿ ಅವರು ಗೆಲ್ಲಬಾರದು, ಅವರು ಪ್ರಧಾನಿಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಬುದ್ಧಿಜೀವಿಗಳು ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹೀಗೊಂದು ಸಲಹೆ
ಮೋದಿ ಪ್ರಧಾನಿಯಾದರೆ ದೇಶಕ್ಕೆ ಅಪಾಯ ಎಂದೆಲ್ಲ ಹೇಳುವ ನಿಮಗೆ(ಬುದ್ಧಿಜೀವಿಗಳು) ದೇಶವನ್ನು ರಕ್ಷಿಸಲು ಒಂದು ಅವಕಾಶವಿತ್ತು. ಅದೇನೆಂದರೆ, ವಡೋದರಾ ಅಥವಾ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆಗಿಳಿಯುವುದು. ಆಪ್ ನಾಯಕ ಅರವಿಂದ ಕೇಜ್ರಿವಾಲ್ರಂತೆ ಮೋದಿ ವಿರುದ್ಧ ಕಣಕ್ಕಿಳಿದು, ಚುನಾವಣೆಯಲ್ಲಿ ಗೆದ್ದಿದ್ದರೆ ಮೋದಿ ಪ್ರಧಾನಿ ಆಗುವುದೂ ತಪ್ಪುತ್ತಿತ್ತು, ದೇಶ ಅಪಾಯ ಎದುರಿಸುವುದೂ ತಪ್ಪುತ್ತಿತ್ತು ಅಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


