ಗಂಗೆಯ ಮಡಿಲಿಗೆ ನಮೋ ನಮೋ...
ವಾರಾಣಸಿ: ವಾರಾಣಿಸಿಯಲ್ಲಿ ಸಿಕ್ಕ ಅಭೂತಪೂರ್ವ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಗರಕ್ಕೆ ಭೇಟಿಕೊಟ್ಟರು. ಕಾಶಿ ವಿಶ್ವನಾಥ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಂಗಾ ಆರತಿ ಪೂಜೆ ನೆರವೇರಿಸಿದ ಅವರು ದಶಾಶ್ವಮೇಧ ಘಾಟ್‌ನಲ್ಲಿ ಶನಿವಾರ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಮಲಿನಗೊಂಡಿರುವ ಗಂಗೆಯನ್ನು ಪವಿತ್ರಗೊಳಿಸುವ ಶಪಥ ಮಾಡಿದರು.
ಮೋದಿ ಹೇಳಿದ್ದು
ಟಿ ಇದು ದೇಶದ ಇತಿಹಾಸವನ್ನೇ ಬದಲಾಯಿಸಿದ ದಿನ. ಇದೇ ಮೊದಲ ಬಾರಿಗೆ ದೇಶದ ನಾಯಕತ್ವ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬರ ಕೈಗೆ ಹೋಗುತ್ತಿದೆ.
ಟಿ ಈವರೆಗೆ ದೇಶವನ್ನು ಕಾಂಗ್ರೆಸ್ ಅಥವಾ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡ ವ್ಯಕ್ತಿಗಳೇ ಆಳಿದ್ದಾರೆ. ಈ ಚುನಾವಣೆ ಹೊಸ ಅಧ್ಯಾಯ ಬರೆದಿದೆ.
ಟಿ ಎನ್‌ಡಿಎ ಜತೆಗೆ ಗುರುತಿಸಿಕೊಳ್ಳದ ಪಕ್ಷಗಳ ಮುಖಂಡರಿಗೆ ಜನ ಸರಿಯಾದ ಪಾಠ ಕಲಿಸಿದ್ದಾರೆ.
ಟಿ ನಾವು ಸರ್ಕಾರ ರಚನೆಗೆ ಒಕ್ಕೂಟ ಮಾಡಿಕೊಳ್ಳುವ ಬಗ್ಗೆ ಕೇಳಿದ್ದೇವೆ. ಆದರೆ, ಈಗೆಂಥ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ಪ್ರತಿಪಕ್ಷ ಸ್ಥಾನಕ್ಕಾಗಿ ಒಕ್ಕೂಟ ರಚಿಸಬೇಕಾಗಿದೆ.
ಟಿ ಪ್ರಚಾರದ ವೇಳೆ ನನ್ನನ್ನು ನಿಮ್ಮ ಜತೆ ಮಾತನಾಡದಂತೆ ತಡೆಯಲಾಯಿತು. ಅಷ್ಟಾದರೂ ನೀವು ನನ್ನನ್ನು ಗೆಲ್ಲಿಸಿದಿರಿ. ವಾರಾಣಸಿಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ.
ಟಿ ನಾನು ಇಲ್ಲಿ ಅಭ್ಯರ್ಥಿಯಾಗಿ ಬಂದೆ. ಈಗ ಈ ಪವಿತ್ರ ಭೂಮಿಯ ಮಗನಾಗಿ ಹೋಗುತ್ತಿದ್ದೇನೆ. ಗಂಗಾ ಮಾತೆ ತನ್ನನ್ನು ಮಾಲಿನ್ಯದಿಂದ ಮುಕ್ತಗೊಳಿಸುವಂತೆ ಕೇಳುತ್ತಿದ್ದಾಳೆ. ನಾನು ವಾರಾಣಸಿ ನಗರ ಹಾಗೂ ಗಂಗೆ ಎರಡನ್ನೂ ಶುದ್ಧೀಕರಿಸುವ ಶಪಥ ಮಾಡುತ್ತೇನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

