ಆಂಧ್ರಶೈಲಿ ಪರಡಿ ಪಾಯಸ

ಆಂಧ್ರಶೈಲಿ ಪರಡಿ ಪಾಯಸ ಮಾಡುವ ವಿಧಾನ...
ಆಂಧ್ರಶೈಲಿ ಪರಡಿ ಪಾಯಸ
ಆಂಧ್ರಶೈಲಿ ಪರಡಿ ಪಾಯಸ
Updated on: 

ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು - 1 ಬಟ್ಟಲು
  • ನೀರು - ಸ್ವಲ್ಪ
  • ಹಾಲು - 2 ಬಟ್ಟಲು
  • ಸಕ್ಕರೆ - 1 ಬಟ್ಟಲು
  • ಪರಡಿ - 1 ಬಟ್ಟಲು
  • ದ್ರಾಕ್ಷಿ - ಸ್ವಲ್ಪ
  • ಗೋಡಂಬಿ - ಸ್ವಲ್ಪ
  • ಏಲಕ್ಕಿ ಪುಡಿ - ಸ್ವಲ್ಪ
  • ತುಪ್ಪ -ಸ್ವಲ್ಪ
ಪರಡಿ ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ 1 ಬಟ್ಟಲು ಮೈದಾ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಹಿಟ್ಟನ್ನು ಮಾಡಿಕೊಳ್ಳಬೇಕು.
  • ಕೈಗೆ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣದಾಗಿ ಮಾಡಿ ಶಾವಿಗೆ ರೀತಿಯಲ್ಲಿ ಮಾಡಿಕೊಳ್ಳಬೇಕು. ಇದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದರೆ. ಪರಡಿ ತಯಾರಾಗುತ್ತದೆ.
ಪರಡಿ ಪಾಯಸ ಮಾಡುವ ವಿಧಾನ
  • ಪಾತ್ರೆಯೊಂದನ್ನು ತೆಗೆದುಕೊಂಡು ಹಾಲನ್ನು ಚೆನ್ನಾಗಿ ಕಾಯಿಸಬೇಕು. ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ತುಪ್ಪವನ್ನು ಹಾಗಿ ಪರಡಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
  • ಇದೇ ಬಾಣಲೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಚೆನ್ನಾಗಿ ಕಾದ ಹಾಲಿಗೆ ಸಕ್ಕರೆ ಹಾಕಬೇಕು. ನಂತರ ಪರಡಿಯನ್ನು ಹಾಕಿ 5-6 ನಿಮಿಷ ಬೇಯಲು ಬಿಡಬೇಕು. ಇದಕ್ಕೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಸ್ವಲ್ಪ ತುಪ್ಪ ಹಾಕಿದರೆ ರುಚಿಕರವಾದ ಪರಡಿ ಪಾಯಸ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com