ಹಾಗಲಕಾಯಿ ಗೊಜ್ಜು
Updated on:
- ಹಾಗಲಕಾಯಿ - 3
- ಉದ್ದಿನ ಬೇಳೆ - 1 ಚಮಚ
- ಮೆಂತ್ಯೆ - ಮುಕ್ಕಾಲು ಚಮಚ
- ಒಣ ಕೊಬ್ಬರಿ - 1 ಬಟ್ಟಲು
- ಒಣಗಿನ ಮೆಣಸಿನಕಾಯಿ - 10-12
- ಹುಣಸೆಹಣ್ಣು - 1 ನಿಂಬೆ ಗಾತ್ರದಷ್ಟು
- ಬೆಲ್ಲ - ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಳ್ಳು - 2 ಚಮಚ
- ಉದ್ದಿನಬೇಳೆ, ಮೆಂತ್ಯೆ, ಎಳ್ಳು, ಒಣಕೊಬ್ಬರಿ, ಒಣಗಿದ ಮೆಣಸಿನಕಾಯಿ ಎಲ್ಲವನ್ನು ಬೇರೆಬೇರೆಯಾಗಿ ಹುರಿದು ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
- ಹಾಗಲಕಾಯಿಯನ್ನು ತೊಳೆದು, ಒರೆಸಿ, ಬೀಜ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು.
- ನಂತರ ಕರಿದ ಹಾಗಲಕಾಯಿ, ಹುಣಸೆರಸ, ಪುಡಿ ಮಾಡಿಕೊಂಡ ಮಿಶ್ರಣ, ಉಪ್ಪು, ಚಿಟಿಕೆ ಅರಿಶಿನ, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- 1 ಚಮಚ ಎಣ್ಣೆ ಕಾಯಿಸಿ, ಸಾಸಿಸವೆ ಹಾಕಿ ಒಗ್ಗರಣೆ ಮಾಡಿದರೆ ಗೊಜ್ಜು ತಯಾರಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kannada Prabha
www.kannadaprabha.com