1 ಕಪ್ ನವಣೆ ಅಕ್ಕಿಗೆ 2 ಬಟ್ಟಲು ನೀರು ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಪ್ರೆಷರ್ ಕುಕ್ಕರೆ ಹಾಕಿ ಅನ್ನ ಮಾಡಿಕೊಳ್ಳಬೇಕು. ನಂತರ ಅನ್ನ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಇದಕ್ಕೆ ಸ್ವಲ್ಪ ನೀರು ಹಾಕಿ ಬಟಾಣಿಯನ್ನು 5-10 ನಿಮಿಷಗಳ ಕಾಲ ಬೇಯಿಸಿಕೊಂಡು, ನೀರು ಬಸಿದು ಬೆಂದ ಬಟಾಣೆಯನ್ನು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.
ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರ್'ನ್ನು ಕೆಂಪಗೆ ಹುರಿದುಕೊಳ್ಳಬೇಕು.
ಪ್ಯಾನ್ ವೊಂದನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಎಣ್ಣೆ ಹಾಕಿ, ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಗೋಡಂಬಿ ಮತ್ತು ಪಲಾವ್ ಎಲೆಗಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಪನ್ನೀರ್ ಹಾಗೂ ಬೆಂದ ಬಟಾಣೆ, ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈಗಾಗಲೇ ಮಾಡಿಕೊಂಡ ನವಣೆ ಅನ್ನವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾಗ ಹಾಗೂ ಆರೋಗ್ಯಕವಾದ ಪನ್ನೀರ್ ನವಣೆ ಫ್ರೈಡ್ ರೈಸ್ ಸವಿಯಲು ಸಿದ್ಧ.