ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪು ಹಾಕಿ ಕಾಯಲು ಬಿಡಬೇಕು. ತುಪ್ಪ ಕಾದ ನಂತರ ಜೀರಿಗೆ, ಪಲಾವ್ ಎಲೆ. ಚಕ್ಕೆ, ಏಲಕ್ಕಿ, ಲವಂಗ, ಸೋಂಪು, ಇಂಗು ಚೆನ್ನಾಗಿ ಉರಿದುಕೊಳ್ಳಬೇಕು.
ನಂತರ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ. ಕಸೂರಿ ಮೇಥಿ. ಶುಂಠಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಉರಿದುಕೊಳ್ಳಬೇಕು. ತಟ್ಟೆಯನ್ನು ಮುಚ್ಚಿ 3-5 ನಿಮಿಷ ಬೇಯಿಸಿ, ಟೊಮೆಟೋ ಪೇಸ್ಟ್ ರೀತಿ ಆದ ಬಳಿಕ ಬೇಯಿಸಿ ಕತ್ತರಿಸಿದ ಆಲೂಗಡ್ಡೆ, ಉಪ್ಪು, 1 ಬಟ್ಟಲು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಬೇಕು.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆಹಣ್ಣಿನ ರಸ, ಕಸೂರಿ ಮೇಥಿ ಹಾಕಿ ಅಲಂಕರಿಸಿದರೆ ರುಚಿಕರವಾದ ಆಲೂ ಕರ್ರಿ ಸವಿಯಲು ಸಿದ್ಧ.