ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮಿಲ್ಕ್ ಮೇಡ್, ಬಟರ್ ಮಿಲ್ಕ್, ಆಲಿವ್ ಆಯಿಲ್, ವಿನಿವ್ವಾ ಎಕ್ಸ್ಟಾಕ್ಟ್. ವಿನೇಗರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಕ್ಕೆ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಭಬೇಕು.
ಬಳಿಕ ಕ್ಯಾರೆಟ್, ಬಾದಾಮಿ, ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಒವನ್ ನಲ್ಲಿ 180 ಡಿಗ್ರಿ ಸೆಲ್ಶಿಯಸ್ ನಲ್ಲಿ 30 ನಿಮಿಷ ಬೇಯಲು ಬಿಟ್ಟರೆ ರುಚಿಕರವಾದ ಕ್ಯಾರೆಟ್ ಕೇಕ್ ಸವಿಯಲು ಸಿದ್ಧ.