ರವೆ ಟೋಸ್ಟ್

ರುಚಿಕರವಾದ ರವೆ ಟೋಸ್ಟ್ ಮಾಡುವ ವಿಧಾನ...
ರವೆ ಟೋಸ್ಟ್
ರವೆ ಟೋಸ್ಟ್
ಬೇಕಾಗುವ ಪದಾರ್ಥಗಳು...
  • ರವೆ - 1 ಬಟ್ಟಲು
  • ಮೊಸರು - ಅರ್ಧ ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
  • ಕ್ಯಾಪ್ಸಿಕಂ - ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
  • ಹಸಿಮೆಣಸಿನ ಕಾಯಿ- 2-3 ಸಣ್ಣಗೆ ಹೆಚ್ಚಿದ್ದು 
  • ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಬ್ರೆಡ್ - 2-3
  • ಬೆಣ್ಣೆ - ಸ್ವಲ್ಪ
ಮಾಡುವ ವಿಧಾನ...
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ರವೆ ಹಾಗೂ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕಲಸಿಕೊಳ್ಳಬೇಕು. 
  • ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಂ, ಕ್ಯಾರೆಟ್, ಕೊಬ್ಬಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು 10-15 ನಿಮಿಷ ನೆನೆಯಲು ಬಿಡಬೇಕು. 
  • ನಂತರ ಬ್ರೆಡ್ ಗಳ ಒಂದು ಬಂದಿಗೆ ಗ್ರೀನ್ ಚಟ್ನಿಯನ್ನು ಹಾಕಿ ಅದರ, ಮೇಲೆ ರವೆ ಮಸಾಲೆಯನ್ನು ಹಾಕಬೇಕು. 
  • ಒಲೆಯ ಮೇಲೆ ತವ ಇಟ್ಟು, ಅದು ಕಾದ ನಂತರ ಮಸಾಲೆಯುಕ್ತ ಬ್ರೆಡ್ ಗಳನ್ನು ಹಾಕಿ ಕೆಂಪಗೆ ಸುಡಬೇಕು, ಮತ್ತೊಂದು ಬದಿಗೆ ಬೆಣ್ಣೆ ಹಾಕಿ ಕೆಂಪಗೆ ಸುಟ್ಟರೆ ರುಚಿಕರವಾದ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com