ಬಟಾಣಿ, ಬ್ರೊಕೋಲಿ ಪಲಾವ್

ರುಚಿಕರವಾದ ಬಟಾಣಿ, ಬ್ರೊಕೋಲಿ ಪಲಾವ್ ಮಾಡುವ ವಿಧಾನ...
ಬಟಾಣಿ, ಬ್ರೊಕೋಲಿ ಪಲಾವ್
ಬಟಾಣಿ, ಬ್ರೊಕೋಲಿ ಪಲಾವ್
ಬೇಕಾಗುವ ಪದಾರ್ಥಗಳು
  • ತುಪ್ಪ- 1 ಚಮಚ
  • ಜೀರಿಗೆ - 1 ಚಮಚ
  • ಚಕ್ಕೆ, ಲವಂಗ- ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ- ಅರ್ಧ ಚಮಚ
  • ಪಲಾವ್ ಎಲೆ - 2-3
  • ಎಲಕ್ಕಿ- 2
  • ಬಟಾಣಿ - ಒಂದು ಚಿಕ್ಕ ಬಟ್ಟಲು
  • ಬ್ರೊಕೋಲಿ- ಸಣ್ಣದಾಗಿ ಕತ್ತರಿಸಿಕೊಂಡಿದ್ದು 1 ಚಿಕ್ಕ ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಅಕ್ಕಿ- ನೆನೆಸಿದ್ದು 1 ಬಟ್ಟಲು
  • ನಿಂಬೆಹಣ್ಣಿನ ರಸ - 1 ಚಮಚ
ಮಾಡುವ ವಿಧಾನ...
  • ಮೊದಲಿಗೆ ಕುಕ್ಕರ್'ಗೆ ಒಂದು ಚಮಚ ತುಪ್ಪವನ್ನು ಹಾಕಿ, ಅದಕ್ಕೆ ಜೀರಿಗೆ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಪಲಾವ್ ಎಲೆ, ಎಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. 
  • ನಂತರ ಈರುಳ್ಳಿ ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಂಡ ಬಳಿಕ ಖಾರದ ಪುಡಿ, ದನಿಯಾ ಪುಡಿ ಉಪ್ಪು, ಬಟಾಣಿ, ಬ್ರೊಕೋಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. 
  • ನಂತರ ನೆನೆಸಿದ ಅಕ್ಕಿ, 2 ಬಟ್ಟಲು ನೀರು ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕಿ 3 ಕೂಗು ಕೂಗಿಸಿಕೊಂಡರೆ ರುಚಿಕರವಾದ ಬಟಾಣಿ, ಬ್ರೊಕೋಲಿ ಪಲಾವ್ ಸವಿಯಲು ಸಿದ್ಧ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com