ಬಟಾಣಿ ಪನ್ನೀರ್ ಮಸಾಲೆ

ರುಚಿಕರವಾದ ಬಟಾಣಿ ಪನ್ನೀರ್ ಮಸಾಲೆ ಮಾಡುವ ವಿಧಾನ...
ಬಟಾಣಿ ಪನ್ನೀರ್ ಮಸಾಲೆ
ಬಟಾಣಿ ಪನ್ನೀರ್ ಮಸಾಲೆ
ಬೇಕಾಗುವ ಪದಾರ್ಥಗಳು...
  • ಪನ್ನೀರ್ - 200 ಗ್ರಾಂ
  • ಎಣ್ಣೆ- ಸ್ವಲ್ಪ
  • ಶುಂಠಿ - ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಬೆಳ್ಳುಳ್ಳಿ- 5-6 ಎಸಳು
  • ಈರುಳ್ಳಿ - 1 ಬಟ್ಟಲು (ಸಣ್ಣಗೆ ಹೆಚ್ಚಿದ್ದು)
  • ಗೋಡಂಬಿ - 4-5
  • ಟೊಮೆಟೊ - 3  (ಸಣ್ಣಗೆ ಹೆಚ್ಚಿದ್ದು)
  • ಒಣಗಿದ ಮೆಣಸಿನ ಕಾಯಿ- ಬಿಸಿನೀರಿನಲ್ಲಿ ನೆನಿಸಿದ್ದು 4-5
  • ಜೀರಿಗೆ - 1 ಚಮಚ
  • ಅರಿಶಿನ ಪುಡಿ- ಚಿಟಿಕೆಯಷ್ಟು
  • ಅಚ್ಚ ಖಾರದ ಪುಡಿ - ಅರ್ಧ ಚಮಚ
  • ದನಿಯಾ ಪುಡಿ - ಅರ್ಧ ಚಮಚ
  • ಗರಂ ಮಸಾಲೆ ಪುಡಿ - ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಬಟಾಣಿ- 200 ಗ್ರಾಂ
ಮಾಡುವ ವಿಧಾನ...
  • ಮೊದಲಿಗೆ ಬಾಣಲೆಗೆ ಎಣ್ಣೆಯನ್ನು ಹಾಕಿ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಪನ್ನೀರ್ ಗಳನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. 
  • ನಂತರ ಅದೇ ಪ್ಯಾನ್ ನಲ್ಲಿಯೇ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಗೋಡಂಬಿ, ಟೊಮೆಟೊವನ್ನು ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು. ನಂತರ ಒಣಗಿದ ಮೆಣಸಿನ ಕಾಯಿಯನ್ನು ಹಾಕಿ ರುಬ್ಬಿಕೊಳ್ಳಬೇಕು. 
  • ಬಳಿಕ ಪ್ಯಾನ್ ವೊಂದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಬಟಾಣಿ ಹಾಕಿ ಹಾಗೂ ಸ್ವಲ್ಪ ನೀರು ಹಾಕಿ 8-10 ನಿಮಿಷ ಬೇಯಲು ಬಿಡಬೇಕು. ಬಟಾಣಿ ಬೆಂದ ನಂತರ ಈ ಹಿಂದೆ ಹುರಿದಿಟ್ಟುಕೊಂಡ ಪನ್ನೀರ್ ಹಾಕಿ 3-5 ನಿಮಿಷ ಬೇಯಿಸಿದರೆ, ರುಚಿಕರವಾದ ಬಟಾಣಿ ಪನ್ನೀರ್ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com