ಬಾಳೆಕಾಯಿ ಚಿಪ್ಸ್
Updated on:
- ಬಾಳೆಕಾಯಿ-2
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ -ಸ್ವಲ್ಪ
- ಕೊಬ್ಬರಿ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಬಾಳೆಕಾಯಿ ಸಿಪ್ಪೆ ತೆಗೆದು, ಸಣ್ಣದಾಗಿ ಚಿಪ್ಸ್ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು.
- ನಂತರ ಕತ್ತರಿಸಿಕೊಂಡ ಬಾಳೆಕಾಯಿಗೆ, ಉಪ್ಪು, ಅರಿಶಿಣದ ಪುಡಿ ಹಾಗೂ 5 ನಿಮಿಷ ನೆನೆಯಲು ಬಿಡಬೇಕು.
- ಬಳಿಕ ನೀರನ್ನು ಬಸಿಯಬೇಕು. ಒಳೆಯ ಮೇಲೆ ಬಾಣಲೆ ಇಟ್ಟು ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.
- ಕಾದ ಎಣ್ಣೆಯಲ್ಲಿ ಬಾಳೆಕಾಯಿಗಳನ್ನು ಹಾಕಿ 10 ನಿಮಿಷಗಳ ಕಾಲ ಕರಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧ.
Kannada Prabha
www.kannadaprabha.com