ಮೊದಲಿಗೆ ಕುಕ್ಕರ್ ಗೆ ನೆನೆಸಿದ ಬೇಳೆ, ನೀರು ಹಾಕಿ, ಮಧ್ಯೆ ಒಂದು ಸಣ್ಣ ಬಟ್ಟನಲ್ಲಿ ಕಡಲೆಕಾಯಿ ಬೀಜ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಒಣಗಿದ ಮೆಣಸಿನಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅರಿಶಿಣದ ಪುಡಿ, ದನಿಯಾಪುಡಿ, ಗರಂ ಮಸಾಲೆ ಪುಡಿ, ಅಚ್ಚ ಖಾರದ ಪುಡಿ ಬೆಲ್ಲ, ಉಪ್ಪು, ನಿಂಬೆಹಣ್ಣಿನ ರಸ ಹಾಕಿ ಕುದಿಸಿಕೊಳ್ಳಬೇಕು.
ನಂತರ ಗೋಧಿ ಹಿಟ್ಟು, ಅರಿಶಿಣ, ಜೀರಿಗೆ, ಉಪ್ಪು ಖಾರದ ಪುಡಿ, ಓಂಕಾಳು, 1 ಚಮಚ ಎಣ್ಣೆ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನಂತೆ ಹಿಟ್ಟನ್ನು ಕಲಸಿಕೊಳ್ಳಬೇಕು. ನಂತರ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ಚಪಾತಿಯಂತೆ ಲಟ್ಟಿಸಿಕೊಂಡಿದ್ದ ಹಿಟ್ಟನ್ನು ಚೌಕಾಕಾರದಲ್ಲಿ ಕತ್ತರಿಸಿಕೊಂಡು ಈಗಾಗಲೇ ಕುದಿಯುತ್ತಿರುವ ದಾಲ್'ಗೆ ಹಾಕಿ 10 ನಿಮಿಷ ಕುದಿಸಿದರೆ, ರುಚಿಕರವಾದ ಗುಜರಾತ್ ಶೈಲಿಯ ದಾಲ್ ಧೋಕ್ಲಿ ಸವಿಯಲು ಸಿದ್ಧ.