ಮಶ್ರೂಮ್ ಮಸಾಲಾ

ರುಚಿಕರವಾದ ಮಶ್ರೂಮ್ ಮಸಾಲಾ ಮಾಡುವ ವಿಧಾನ...
ಮಶ್ರೂಮ್ ಮಸಾಲಾ
ಮಶ್ರೂಮ್ ಮಸಾಲಾ
Updated on: 

ಬೇಕಾಗುವ ಪದಾರ್ಥಗಳು

  • ಅಣಬೆ- 200 ಗ್ರಾಂ
  • ಗಸಗಸೆ- 1 ಚಮಚ
  • ಗೋಡಂಬಿ- 6-7
  • ಹಸಿಮೆಣಸಿನ ಕಾಯಿ-3
  • ಕಾಯಿ ತುರಿ- ಅರ್ಧ ಬಟ್ಟಲು
  • ಎಣ್ಣೆ- 3 ಚಮಚ
  • ಚಕ್ಕ, ಲವಂಗ-ಸ್ವಲ್ಪ
  • ಪಲಾವ್ ಎಲೆ- 2
  • ಜೀರಿಗೆ - 1 ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
  • ಅರಿಶಿಣದ ಪುಡಿ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ದನಿಯಾ ಪುಡಿ- ಅರ್ಧ ಚಮಚ
  • ಖಾರದ ಪುಡಿ - 1 ಚಮಚ
  • ಜೀರಿಗೆ ಪುಡಿ - ಕಾಲು ಚಮಚ
  • ತುಪ್ಪ- 2 ಚಮಚ
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ
  • ಗರಂ ಮಸಾಲಾ ಪುಡಿ - ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
  • ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಟೊಮೆಟೋವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಕುದಿಯಲು ಬಿಡಿ.
  • ನಂತರ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ 10-15 ನಿಮಿಷ ನೀರು ಹಾಕಿ ಕುದಿಯಲು ಬಿಡಿ.
  • ಪ್ಯಾನ್ ಒಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com