ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ ಹಾಕಿ. ಇದು ಕೆಂಪಗಾದ ಬಳಿಕ ಜೀರಿಗೆ, ಮೆಂತ್ಯೆ, ಇಂಗು, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿದುಕೊಳ್ಳಿ.
ನಂತರ ಖಾರದ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಚೆನ್ನಾಗಿ ತೊಳೆದು, ಬೀಜ ತೆಗೆದು ಕತ್ತರಿಸಿಕೊಂಡ ನೆಲ್ಲಿಕಾಯಿ, ಉಪ್ಪು, ಅರಿಶಿಣದ ಪುಡಿ ಹಾಕಿ 8-10 ನಿಮಿಷ ಸಣ್ಣ ಉರಿಯಲ್ಲಿ ನೆಲ್ಲಿಕಾಯಿ ಬೇಯಲು ಬಿಡಿ. ಆಗಾಗೆ ಕೈಯಾಡಿಸುತ್ತಿರಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್'ಗೆ ಹಾಕಿ, ನಂತರ ಸ್ವಲ್ಪ ಬೆಲ್ಲವನ್ನೂ ಸೇರಿಸಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಂಡರೆ ರುಚಿಕರವಾದ ಬೆಟ್ಟದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.