ಬೆಂಗಳೂರು: ಅನುಮತಿಯಿಲ್ಲದೇ ಯುವತಿಯ ಫೋಟೋ ತೆಗೆದ ಮಾಜಿ ಸೈನಿಕನ ಬಂಧನ

ಯುವತಿಯ ಫೋಟೊ ತೆಗೆದಿದ್ದ ಮಾಜಿ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ. ಸೆಂಥಿಲ್‌ (35) ಬಂಧಿತ ಆರೋಪಿ. ಮಾಜಿ ಸೈನಿಕರಾಗಿರುವ ಸೆಂಥಿಲ್ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವತಿಯ ಫೋಟೊ ತೆಗೆದಿದ್ದ ಮಾಜಿ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ. ಸೆಂಥಿಲ್‌ (35) ಬಂಧಿತ ಆರೋಪಿ. ಮಾಜಿ ಸೈನಿಕರಾಗಿರುವ ಸೆಂಥಿಲ್ ಕುಮಾರ್ 2016 ರಲ್ಲಿ ನಿವೃತ್ತಿಯಾಗಿದ್ದರು,
ಸುದ್ದಿ ವಾಹಿನಿಯೊಂದರ ಇಂಟರ್ನಿಯಾಗಿರುವ ಯುವತಿ ಚರ್ಚ್ ಸ್ಟ್ರೀಟ್ ನಲ್ಲಿರುವ ಕೆರೆ  ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ವೇಳೆ ಸೆಂಥಿಲ್ ಆಕೆಯ ಫೋಟೋ ತೆಗೆದಿದ್ದಾರೆ.
ಇದನ್ನು ಗಮನಿಸಿದ ಯುವತಿ ತನ್ನ ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದ್ದಾಳೆ. ನಂತರ ಆತನ ಬಳಿ ಹೋಗಿ ಮೊಬೈಲ್ ಕೊಡುವಂತೆ ಕೇಳಿದಾಗ ಆತ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ನಂತರ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ಮೊಬೈಲ್ ಪಡೆದು ಅಕನ್ನು ಪರಿಶೀಲಿಸಿದಾಗ ಯುವತಿಯ ಹಲವು ಫೋಟೋಗಳು ಮೊಬೈಲ್ ನಲ್ಲಿದ್ದವು.
ನಂತರ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಲಾಯಿತು ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆ (ಐಪಿಸಿ 509)  ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಆರೋಪಿಯು ಹೇಳಿದ್ದಾರೆ. ಸೆಂಥಿಲ್ ರಾಮಚಂದ್ರಪುರಂ ನಿವಾಸಿಯಾಗಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com