ಬೆಂಗಳೂರು: ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಪಿಂಕ್ ಟಾಯ್ಲೆಟ್

Published On :
ಬೆಂಗಳೂರು: ಪಿಂಕ್ ಹೊಯ್ಸಳ ಬಳಿಕ ಮಹಿಳೆಯರು, ಹೆಣ್ಣು ಮಕ್ಕಳು ಹಾಗೂ ಮಕ್ಕಳ ರಕ್ಷಣೆಗಾಗಿ ಸರ್ಕಾರ ಶೀಘ್ರದಲ್ಲಿಯೇ ನಗರದಲ್ಲಿ ಪಿಂಕ್ ಟಾಯ್ಲೆಟ್ ಗಳನ್ನು ನಿರ್ಮಾಣ ಮಾಡಲಿದೆ.
ರಾಜಧಾನಿ ದೆಹಲಿಯಲ್ಲಿರುವ ಮಾದರಿ ಪಿಂಕ್ ಟಾಯ್ಲೆಟ್ ಗಳನ್ನು ಬೆಂಗಳೂರು ನಗರಕ್ಕೂ ತರಲು ಯೋಜನೆ ಸಿದ್ಧವಾಗಿದ್ದು, ರಾಷ್ಟ್ರೀಯ ಮಕ್ಕಳ ಆಯೋಗ ಪಿಂಕ್ ಟಾಯ್ಲೆಟ್ ಯೋಜನೆಗೆ ಚಾಲನೆ ನೀಡುವಂತೆ ರಾಜ್ಯ ಮಕ್ಕಳ ಆಯೋಗಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಅಧಿಕಾರಗಳ ಸಹಯೋಗದೊಂದಿಗೆ ಯೋಜನೆ ಆರಂಭಗೊಳ್ಳಲಿದದೆ. ಯೋಜನೆ ಅನುಷ್ಠಾನಕ್ಕೆ ತರುವಂತೆ ಈಗಾಗಲೇ ರಾಷ್ಟ್ರೀಯ ಆಯೋಗ ಸೂಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ತರಲು ಕಾರ್ಯಗಳು ಆರಂಭಗೊಂಡಿದೆ ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಪಿಂಕ್ ಟಾಯ್ಲೆಟ್ ಗಳ ಅಗತ್ಯತೆಗಳ ಕುರಿತಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ಬಳಿಕವಷ್ಟೇ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಕೆಪಿಸಿಪಿಆರ್ ಮುಖ್ಯಸ್ಥ ಕ್ರಿಪಾ ಆಳ್ವಾ ಅವರು ಹೇಳಿದ್ದಾರೆ.
ಪಿಂಕ್ ಟಾಯ್ಲೆಟ್ ಯೋಜನೆ ಕುರಿತಂತೆ ಈಗಾಗಲೇ ರಾಷ್ಟ್ರೀಯ ಆಯೋಗ ಅಧಿಕಾರಿಗಳಿಗೆ ಮಾರ್ಗದರ್ಶನಗಳನ್ನು ನೀಡಿದ್ದು, ಟಾಯ್ಲೆಟ್ ಗಳು ಗುಲಾಬಿ ಬಣ್ಣವನ್ನು ಹೊಂದಿರಲಿವೆ. ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಪ್'ಕಿನ್ ವೆಂಡಿಂಗ್ ಯಂತ್ರ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳಿರಲಿವೆ. ಮಕ್ಕಳಿಗೆ ಹಾಲುಣಿಸಲು, ಮಕ್ಕಳನ್ನು ನೋಡಿಕೊಳ್ಳಲು, ಹೆಣ್ಣು ಮಕ್ಕಳಿಗೆ ವಿವಿಧ ವ್ಯವಸ್ಥೆಗಳು ಶೌಚಾಲಯದಲ್ಲಿ ಕಲ್ಪಿಸುವಂತೆ ಪತ್ರದಲ್ಲಿ ಆಯೋಗ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


