ದಸರಾ ದಾಖಲೆ ಮುರಿದ 'ನಮ್ಮ ಮೆಟ್ರೋ': ಒಂದೇ ದಿನದಲ್ಲಿ 4.83 ಲಕ್ಷ ಪ್ರಯಾಣಿಕರ ಸಂಚಾರ

ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಈ ಹಿಂದಿನ ದಸರಾ ದಾಖಲೆಯನ್ನು ಸರಿಗಟ್ಟಿದ್ದು, ಒಂದೇ ದಿನ 4.83 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಈ ಹಿಂದಿನ ದಸರಾ ದಾಖಲೆಯನ್ನು ಸರಿಗಟ್ಟಿದ್ದು, ಒಂದೇ ದಿನ 4.83 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. 

ದೀಪಾವಳಿ ಹಬ್ಬ ಹಾಗೂ ವಾರಾಂತ್ಯ ಹಿನ್ನೆಲೆಯಲ್ಲಿ ಸರಣಿ ರಜೆಗಳಿದ್ದು, ಇದರಿಂದಾಗಿ ನಗರದಿಂದ ಜನ ಬೇರೆ ಬೇರೆ ಊರುಗಳಿಗೆ ತೆರಳಲು ಮೆಟ್ರೋಗೆ ಮುಗಿಬಿದ್ದಿದ್ದರು. ಗುರುವಾರ ನೇರಳ ಮಾರ್ಗದಲ್ಲಿ 2,63,327 ಹಾಗೂ ಹಸಿರು ಮಾರ್ಗದಲ್ಲಿ 2,19,776 ಜನ ಪ್ರಯಾಣಿಸಿದ್ದು, ನಮ್ಮ ಮೆಟ್ರೋಗೆ ಆದಾಯ ಹೆಚ್ಚಿದೆ. 

ಈ ಹಿಂದೆ ಆಗಸ್ಟ್ 14 ರಂದು 4,53,744, ಏಪ್ರಿಲ್ 5 ರಂದು 4,52,563ರಷ್ಟು ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com