ಬೆಂಗಳೂರು: SIR ಕರ್ತವ್ಯದಲ್ಲಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಹೃದಯಾಘಾತಕ್ಕೆ ಬಲಿ

ಮೃತ ಶಿಕ್ಷಕಿಯನ್ನು ಶಮಂತ ಕುಮಾರಿ(44) ಎಂದು ಗುರುತಿಸಲಾಗಿದ್ದು, ಅವರು ಇತ್ತೀಚೆಗೆ ಬಿಎಲ್ಒ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
Govt School Teacher Dies Of Heart Attack, Family Alleges SIR Related Stress
ಶಮಂತ ಕುಮಾರಿ
Updated on

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕರ್ತವ್ಯದಲ್ಲಿದ್ದ ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತ ಶಿಕ್ಷಕಿಯನ್ನು ಶಮಂತ ಕುಮಾರಿ(44) ಎಂದು ಗುರುತಿಸಲಾಗಿದ್ದು, ಅವರು ಇತ್ತೀಚೆಗೆ ಬಿಎಲ್ಒ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇದರ ಬೆನ್ನಲ್ಲೇ ಶುಗರ್, ಬಿಪಿ ಹೆಚ್ಚಾಗಿ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಗುರುವಾರ ತಡ ರಾತ್ರಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಮೇಲಾಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆ ಬೇಗ ಬೇಗ ಮುಗಿಸುವಂತೆ ಒತ್ತಡ ಹಾಕುತ್ತಿದ್ದರು. ಈ ಕೆಲಸದಿಂದ ಬಿಡುಗಡೆ ಮಾಡಬಹುದಾ ಎಂದು ಕೇಳಿಕೊಂಡಿದ್ದರು ಎನ್ನಲಾಗಿದೆ.

Govt School Teacher Dies Of Heart Attack, Family Alleges SIR Related Stress
SIR ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆದ್ರೆ ಪೌರತ್ವ ಕಳೆದುಕೊಳ್ಳುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಶಿಕ್ಷಕಿ ಶಮಂತ ಕುಮಾರಿ ಅವರು ಮೇಲಾಧಿಕಾರಿಗಳ ಒತ್ತಡದಿಂದ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com