ಬೆಂಗಳೂರು ಸರಣಿ ಹತ್ಯೆ ಪ್ರಕರಣ: ನಾನ್-ವೆಜ್ ಊಟಕ್ಕೆ ಕರೆದು ಮೂಸಂಬಿ ಜ್ಯೂಸ್ನಲ್ಲಿ ನಿದ್ದೆ ಮಾತ್ರೆ ಬೆರೆಸಿ 7 ಮಂದಿ ಕಥೆ ಮುಗಿಸಿದ ಪಾಪಿ..!ಹತ್ಯೆ ವೇಳೆ ಸಂತ್ರಸ್ತರು ಕಿರುಚಾಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಬಾರದು ಎಂಬ ಉದ್ದೇಶದಿಂದ ಆರೋಪಿ ಈ ವಿಧಾನ ಅನುಸರಿಸಿದ್ದಾನೆ ಎನ್ನಲಾಗಿದೆ.
ಗೃಹಪ್ರವೇಶವಾದ ಎರಡೇ ತಿಂಗಳಿಗೆ ಮನೆ ದೋಚಿದ ಖದೀಮರು: ಚಾಕು ತೋರಿಸಿ ಚಿನ್ನ-ನಗದು ಕಸಿದು ಪರಾರಿ..!ದಂಪತಿ ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದು, ಕೇವಲ ಎರಡು ತಿಂಗಳ ಹಿಂದಷ್ಟೇ ಗೃಹಪ್ರವೇಶ ನೆರವೇರಿಸಿದ್ದರು. ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಈ ಮನೆಗೆ ಮುಸುಕುಧಾರಿ ದರೋಡೆಕೋರರು ನುಗ್ಗಿದ್ದಾರೆ.
ರೇಸ್ ಕೋರ್ಸ್ ಭೂಮಿ ಮರಳಿ ಪಡೆದ ರಾಜ್ಯ ಸರ್ಕಾರ: 79 ಎಕರೆ ಜಾಗದಲ್ಲಿ ತಲೆಎತ್ತಲಿದೆ ಬಹುಮಹಡಿ ಆಡಳಿತ ಸೌಧ..!ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣ ವೆಚ್ಚ ಇನ್ನೂ ಅಂತಿಮವಾಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳ ನಡುವೆ ಮಾಹಿತಿ ವಿನಿಮಯ ವೇಗಗೊಳಿಸುವುದು ಹಾಗೂ ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ನಮ್ಮ ಮನೆಗೆ 'ಲಕ್ಷ್ಮಿ' ಆಗಮಿಸಿದ್ದಾಳೆ: ಹೆಣ್ಣು ಮಗುವಿಗೆ ತಂದೆಯಾದ ಶಾಸಕ ಪ್ರದೀಪ್ ಈಶ್ವರ್ದೇವರ ಆಶೀರ್ವಾದದಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಗುವನ್ನು ಹಿಡಿದುಕೊಂಡಿರುವ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
KPSC ನೇಮಕಾತಿ ಹಗರಣ: ಕೆಪಿಎಸ್ಸಿ ಸದಸ್ಯೆ ಬಿ.ವಿ ಗೀತಾ ಬಂಧಿಸಿದ SITಮಾಜಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ಗೀತಾ ಕೂಡ ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷದಿಂದ ದ್ವಿಭಾಷಾ ಮಾಧ್ಯಮ ಜಾರಿ; KPS ಸ್ಕೂಲ್ಗಳಿಗೆ ಉಚಿತ ಬಸ್ ಸೌಲಭ್ಯ: ಸಚಿವ ಮಧು ಬಂಗಾರಪ್ಪಅನೇಕರು ನೆರೆಯ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದು, ಬಸ್ ಸೌಲಭ್ಯವಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ತೊಂದರೆ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು.
ಚಳಿಗಾಲದ ಅಧಿವೇಶನ: ಮೀಸಲಾತಿ, ಅನುದಾನ 'ದುರುಪಯೋಗ' ವಿಚಾರ ಮುಂದಿಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಲು BJP ತಂತ್ರ..!ಈ ವಿಚಾರಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯಲು ಎನ್ಡಿಎ ಕಾರ್ಯತಂತ್ರ ರೂಪಿಸುತ್ತಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿ 14ನೇ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಪಡೆದಿದ್ದು, 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ರಾಜ್ಯಾದ್ಯಂತ 7 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಕಚೇರಿ-ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; Videoಧಾರವಾಡ, ಚಿತ್ರದುರ್ಗ, ಬಾಗಲಕೋಟೆ, ಹಾಸನ, ಮೈಸೂರು, ಚಾಮರಾಜನಗರ ಮತ್ತು ಬೀದರ್ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲೋ, ನಮಗೂ ಕಾರ್ಯಕರ್ತರಿದ್ದಾರೆ; ಚುನಾವಣೆ ಬಂದಾಗ ಗೆದ್ದು ತೋರಿಸಿ: ಡಿಕೆಶಿ ಮುಂದೆಯೇ ಕೈ ಕಾರ್ಯಕರ್ತರಿಗೆ ಜಾಡಿಸಿದ ಬಿಜೆಪಿ ಶಾಸಕಿ!ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳ ಬಗ್ಗೆ ಶಾಸಕಿ ಮಂಜುಳಾ ಲಿಂಬಾವಳಿ ವಿವರಣೆ ಕೊಡ್ತಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕೂತಿದ್ದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು.
ಹದಗೆಟ್ಟ ಗ್ರಾಮೀಣ ರಸ್ತೆಗಳಿಗೆ ಮುಕ್ತಿ: 10 ಸಾವಿರ ಕೋಟಿ ರೂ ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ; 15 ಸಾವಿರ ಕಿ.ಮೀ ರಸ್ತೆಗಳಿಗೆ ಹೊಸ ರೂಪ..!ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ತೀವ್ರವಾಗಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವುದು ಮತ್ತು ಪ್ರಮುಖ ಗ್ರಾಮೀಣ ರಸ್ತೆ ಜಾಲದ ಬಾಳಿಕೆ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮೀಸಲು ಅಂಗೀಕಾರ ಸಾಧ್ಯತೆ; ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ: ಸಿಎಂಈ ಮೀಸಲಾತಿಯಿಂದಾಗಿ ನಾವು ಎಷ್ಟು ಜನರು ಸಂಸತ್ ಹಾಗೂ ವಿಧಾನಸೌಧದಿಂದ ಹೊರಬರಬೇಕಾಗುವುದೋ, ತಿಳಿಯದು. ಆದರೆ ಶೇ. 50 ರಷ್ಟು ಹೆಚ್ಚುವರಿ ಕ್ಷೇತ್ರಗಳಿರುವುದು ಎಂದು ಹೇಳಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಬರುವುದು ಎಂದು ತಿಳಿದಿಲ್ಲ ಎಂದು ಹೇಳಿದರು.
ಗುಂಡ್ಲುಪೇಟೆಯಲ್ಲಿ ಕೋಮು ಬಣ್ಣ ಪಡೆಯುತ್ತಿದ್ದ ಪ್ರಕರಣಕ್ಕೆ ಟ್ವಿಸ್ಟ್; ದೇವಸ್ಥಾನದ ಮುಂದೆ ಮಾಂಸ ಹಾಕಿದ್ದು ಶ್ವಾನ; CCTVಯಲ್ಲಿ ಬಯಲಾಯ್ತು ಅಸಲಿ ಸತ್ಯ!ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಇದು ಬೀದಿ ನಾಯಿಯ ಕೃತ್ಯವೆಂದು ಸಾಬೀತಾಗಿದ್ದು, ಇದರಿಂದ ಸಂಭವಿಸುತ್ತಿದ್ದ ದೊಡ್ಡದೊಂದು ಅನಾಹುತವೊಂದು ತಪ್ಪಿದಂತಾಗಿದೆ.
ಪಂಚಾಯತಿ ಚುನಾವಣೆ: ಗ್ರಾಮೀಣ ಮೂಲಸೌಕರ್ಯ ಯೋಜನೆಗಳಿಗೆ 16 ಸಾವಿರ ಕೋಟಿ ರೂ. ವೆಚ್ಚ; ಸರ್ಕಾರ ಆದೇಶಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ 15,000 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ 10,000 ಕೋಟಿ ರೂಪಾಯಿ ವೆಚ್ಚ ಮಾಡಲಿದೆ.
₹15,000 ಮಾಸಿಕ ಗೌರವ ಧನಕ್ಕೆ ಆಗ್ರಹ: ಫ್ರೀಡಂಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ!ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ಸರ್ಕಾರವು ವೇತನ ಹೆಚ್ಚಿಸುವ ಬದಲು ಆಶಾ ಕಾರ್ಯಕರ್ತೆಯರನ್ನು "ಮನೆಗೆ ಕಳುಹಿಸಲು" (ಕೆಲಸದಿಂದ ತೆಗೆದುಹಾಕಲು) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?