ಸುಪ್ರೀಂ ಕೋರ್ಟ್ ಆದೇಶಕ್ಕೂ ಡೋಂಟ್ ಕೇರ್: ಸಫಾರಿ ಪುನಃ ತೆರೆಯಲು ಪ್ಲಾನ್; ಮೈಸೂರಿನ ವಕೀಲರಿಂದ ಲೀಗಲ್ ನೋಟಿಸ್ಹುಲಿಗಳ ದಾಳಿ ಮತ್ತು ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ನಂತರ ಎರಡು ಹುಲಿ ಸಂರಕ್ಷಿತ ಪ್ರದೇಶಗಳ ಕೆಲವು ಭಾಗಗಳಲ್ಲಿನ ಸಫಾರಿ ಕಾರ್ಯಾಚರಣೆಗಳನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿದೆ.
'ಕುರ್ಚಿಗಾಗಿ ಹೊಡೆದಾಡೋದು ಬಿಡಿ, ನಮ್ಮ ಸಮಸ್ಯೆ ಕಡೆ ಗಮನ ಕೊಡಿ': ಮೆಕ್ಕೆಜೋಳ ಬೆಳೆಗಾರರ ಬೇಡಿಕೆಯೇನು?ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಸರ್ಕಾರ 2,400 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಜಿಲ್ಲೆಯಲ್ಲಿ ಖರೀದಿ ಕೇಂದ್ರವನ್ನು ತೆರೆಯುಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟಿಸುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿನ ಮಹಿಳೆಯರು- ಮಕ್ಕಳ ಸಮಸ್ಯೆ ಪರಿಹರಿಸಲು ಕಾವಲು ಸಮಿತಿ ಸ್ಥಾಪನೆಮಕ್ಕಳ ಮತ್ತು ಮಹಿಳೆಯರ ಕಳ್ಳಸಾಗಣೆ, ಬಾಲ್ಯ ವಿವಾಹ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯನ್ನು ತಡೆಗಟ್ಟಲು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಕಾವಲು ಸಮಿತಿಗಳನ್ನು ರಚಿಸುವಂತೆ ನಿರ್ದೇಶಿಸಿದೆ.
ಉತ್ತರಕನ್ನಡ ಜಿಲ್ಲೆಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ: ಭರದ ಸಿದ್ಧತೆ; ಪ್ರವಾಸಿಗರಿಗೆ ನೋ ಎಂಟ್ರಿ..!ಡಿ.12 ರಂದು ಸುಮಾರು 45 ದಿನಗಳ ಪ್ರವಾಸಕ್ಕಾಗಿ ದಲೈ ಲಾಮಾ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ಬಿಕ್ಕಟ್ಟಿನ ಸಮಯದಲ್ಲೂ ಎದೆಗುಂದಲಿಲ್ಲ, ಸಿಎಂ ಆಗಲು ಅವಕಾಶ ನೀಡಿ: ಡಿಕೆಶಿ ಪರ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್..!ಡಿಕೆ ಶಿವಕುಮಾರ್ ಸಮುದಾಯದ ಅಗ್ರಗಣ್ಯ ನಾಯಕ. ಆ ಪಕ್ಷಕ್ಕೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಅವರು ಪಟ್ಟ ನೋವು ಯಾರು ಪಟ್ಟಿಲ್ಲ. ಬಹಳ ಇಕ್ಕಟ್ಟಿನ ವೇಳೆ ಅಧ್ಯಕ್ಷ ಸ್ಥಾನ ಕೊಟ್ಟರು.
ಕೆಟ್ಟ ಮೇಲೆ ಬುದ್ದಿ ಕಲಿತ KMF: ಫೇಕ್ ನಂದಿನಿ ತುಪ್ಪ ಕಡಿವಾಣಕ್ಕೆ ಭರ್ಜರಿ ಪ್ಲಾನ್; ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್!ಕೆಎಂಎಫ್ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ.
ಸಿದ್ದರಾಮಯ್ಯ ಕೇವಲ ಕುರುಬ ನಾಯಕರಲ್ಲ, ಶೋಷಿತ ವರ್ಗದ ನಾಯಕ; ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಪಕ್ಷದ ವಿರುದ್ಧ ಹೋರಾಟ: ಸಮುದಾಯ ಎಚ್ಚರಿಕೆಯಾವುದೇ ಸಮುದಾಯದ ಸ್ವಾಮೀಜಿ ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ನಿಲುವು ತೆಗೆದುಕೊಳ್ಳುವುದು ತಪ್ಪು. ಆದರೆ, ನಾವು ಸಿದ್ದರಾಮಯ್ಯ ಕುರುಬ ಸಮುದಾಯದವರು ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿಲ್ಲ.
ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹೋಗುತ್ತಿದ್ದ ಕುಟುಂಬ ಮಸಣಕ್ಕೆ: ಕೋಲಾರ ಮೂಲದ ಐವರು ಸಾವು; Videoಯಮ್ಮಿಗನೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಬೆಳಗಿನ ಜಾವ 4 ಗಂಟೆಗೆ ಅದೋನಿಯಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ಮಹಿಳೆಯರು ಸಬಲರಾದರೆ ಮಾತ್ರ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ: ಸಿಎಂ ಸಿದ್ದರಾಮಯ್ಯಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ವರ್ಷದ ಬಜೆಟ್ ನಲ್ಲಿ 95,000 ಕೋಟಿ ರೂ. ಗಳನ್ನು ಮಹಿಳಾ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ.
ರೈತರಿಂದಲೇ ನೇರವಾಗಿ ಮೆಕ್ಕೆಜೋಳ ಖರೀದಿಸಿ: ಡಿಸ್ಟಿಲರಿಗಳಿಗೆ ಸಿಎಂ ಸೂಚನೆಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಧಾನ್ಯ ಆಧಾರಿತ ಡಿಸ್ಟಿಲರಿಗಳು ನಾಫೆಡ್/ಎನ್ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಹೊರಡಿಸಿದೆ.
ವಿಜಯಪುರ: ಸಿಲಿಂಡರ್ ಸ್ಫೋಟದಿಂದ ಗೂಡಂಗಡಿಗಳು ಸುಟ್ಟು ಕರಕಲುಕಳೆದ ತಡರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಐದು ತಳ್ಳುಗಾಡಿಗಳು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಸಂಗ್ರಹಿಸಿದ್ದ ಗೋದಾಮು ಸುಟ್ಟು ಕರಕಲಾಗಿದೆ. ನಗರದ ಲಿಂಗದಗುಡಿ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
News Headlines 28-11-25 | ಮೋದಿಗೆ 'ಭಾರತ ಭಾಗ್ಯ ವಿಧಾತ' ಬಿರುದು; ಪುನೀತ್ ಕೆರೆಹಳ್ಳಿಗೆ ಸನ್ಮಾನ: ಸಂತೋಷ್ ಹೆಗ್ಡೆ ವಿಷಾದ; ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ- PM ಗೆ ಸಿಎಂ ಮನವಿ!
ಪ್ರೆಸ್ಟೀಜ್ ಫಾಲ್ಕನ್ ಸಿಟಿ: ಕಲುಷಿತ ನೀರಿನಿಂದ ಮಗು ಸಾವು; ಸೋಶಿಯಲ್ ಮೀಡಿಯಾದಲ್ಲಿ ವದಂತಿ; ಅಧಿಕಾರಿಗಳು ಹೇಳಿದ್ದೇನು?ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ನೀರಿನ ಮಾದರಿಗಳನ್ನು ಸಂಗ್ರಹಿಸಿದರು.
ನನ್ನಿಂದ ತಪ್ಪಾಗಿದೆ... ವಿಷಾದಿಸುತ್ತೇನೆ: ಮಾಜಿ ನ್ಯಾ. ಸಂತೋಷ್ ಹೆಗ್ಡೆಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನ್ಯಾ. ಸಂತೋಷ್ ಹೆಗ್ಡೆ ಅವರು ಸನ್ಮಾನ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಸಂತೋಷ್ ಹೆಗ್ಡೆ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ದಶಕಗಳ ಹಿಂದೆಯೇ ಉಡುಪಿ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಿ ಮೋದಿಇಂದು ಉಡುಪಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಯ ನಂತರ ಸುಮ್ಮನೆ ಕುಳಿತುಕೊಳ್ಳುತ್ತಿದ್ದವು. ಆದರೆ ನವ ಭಾರತ ತನ್ನ ಜನರನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಯಾರ ಮುಂದೆಯೂ ತಲೆಬಾಗುವುದಿಲ್ಲ ಅಥವಾ ಹಿಂಜರಿಯುವುದಿಲ್ಲ" ಎಂದರು.