ಕೈಲಾಸ- ವಾಸಿಯಾಗಬಹುದೇನೋ?
ತಿಮ್ಮಾ: ಬಡವನ ತಾಟಗೆ ಪುಲಾವು ಬಂತು ಅಂದರ ದೇಶದಾಗ ಚುನಾವ ಬಂತು ಅಂತ ಅರ್ಥ...
ತಮ್ಮಾ: ಹೌದ ಬಿಡು, ತೆಗ್ಗ-ದಿನ್ನಿ ಇದ್ದ ರೋಡ ಸಾಪ ಸಪಾಟ್ ಆಗಿ ಅದ್ಯಾವುದೋ ಹಿರೋಯಿನ್ ಗಲ್ಲ ಆದಹಂಗ ಆಗ್ತಾವ ಅಂತ ಗೊಲ್ಲ ಒಬ್ಬ ಹೇಳಿದ್ನಲಾಡಡ.
ತಿಮ್ಮಾ: ಅದು ಎಂದಿನ ಸುದ್ದಿ? ಏನ್ ಕಥಿ? ಇಂದಿನ ವಿಷೇಶ ಏನ್ ಹೇಳು?
ತಮ್ಮಾ: ಇಂದಿನ ಸುದ್ದಿ ಎನಪಾ ಅಂದ್ರ ರಾಜಕಾರಣದಾಗಿನ ಕೆಲವು ಹಳೇ ಹುಲಿ ಚುನಾವಣೆ ಕಣದಿಂದ ಹಿಂದ ಸರಿಯಾಕತ್ತಾರಂತ!
ತಿಮ್ಮಾ: ಅದಕ್ಕಡ ಏನು, ಹೊಸ ಸಿಂಹಗಳನ್ನ ಪಕ್ಷದ ಮುಖಂಡರ ಹುಡುಕ್ಕಾಡಾಕತ್ತಾರು.
ತಮ್ಮಾ: ಹೌದಲಾ ಅದಕ್ಕ ಮೈಸೂರು ಹುಲಿಗಳಿಗೆ ಪ್ರಸಿದ್ಧ ಇತ್ತಲಾ, ಆ ಕ್ಷೇತ್ರದಿಂದ ಸಿಂಹದ ಪ್ರತಾಪ ನೋಡಬೇಕಪಾಡ...
ತಿಮ್ಮಾ: ಹುಲಿ ಸಿಂಹದ ಕಥಿ ಬಿಡು, 'ಕೈ' ಪಕ್ಷದಾಗ ಏನ್ ನಡದೈತಿ?
ತಮ್ಮಾ: ಯಾವನಿಗೊತ್ತು ಅಲ್ಲೇನು ನಡದೈತಿ ಅಂತ!
ತಿಮ್ಮಾ: ಹಂಗಂದ್ರ ಹ್ಯಾಂಗಲೆ... ದಿನಾ 8-10 ಪೇಪರ್ ಓದತಿ, 4-6 ತಾಸು ಟಿವಿ ನೋಡ್ತಿ... ಏನೂ ಗೋತ್ತಿಲ್ಲಂದ್ರ ಹ್ಯಾಂಗಪಾ...?
ತಮ್ಮಾ: ಅಲ್ಲಪಾ, ಅಲ್ಲೆ ಒಳಗಿದ್ದವರಿಗೆ ಗೊತ್ತಿಲ್ಲ ಎಲ್ಲೆ? ಯಾವಾಗ? ಎನಾಕ್ಕೆತಿ ಅಂತ!
ತಿಮ್ಮ: ಹಿಂಗಾಗಿ ಹೊರಗಿದ್ದ ನಮ್ಮಂಥವರಿಗೆ ಎನು ಗೊತ್ತಾಕ್ಕೆತಿ ಅಂತಿಯೇನು?
ತಮ್ಮಾ: ಇನ್ನೂ ಬೇಕಾದರ ಕಸಬರಗಿ ಕುಮಾರನ ಮಜಾ ಮಜಾ ಸುದ್ದಿ ಅದಾವು ನೋಡ.
ತಿಮ್ಮಾ: ಹೌದು, ಅವಾ ಎನೋ ಮೋದಿ ಸಾಹೇಬರ ಮನಿಗೆ ಹೋಗಿದ್ನಂತ, ಪ್ರಶ್ನೆ ಪತ್ರಿಕೆ ಒಯ್ದಿದ್ನಂತಪಾ... ಮುಂಬಯಿ ಲೋಕಲ್ ಹತ್ತಿದ್ನಂತ...
ತಮ್ಮಾ: ಏಯ್ ಬೆಂಗಳೂರು- ಮಂಗಳೂರಿಗೆ ಬರಾವದಾನವಾ...
ತಿಮ್ಮಾ: ಏಯ್ ಬೆಂಗಳೂರಿಗೆ ಬರಲೇಬೇಕಪಾ ಅವಾಡಡ... ಭಯಂಕರ ಕಸಾ ಇರತೈತಿಲ್ಲೆ...
ತಮ್ಮಾ: ಹೌದೌದು ತ್ಯಾಜ್ಯ ಅಂತ ಅಂತಾರ ಈ ಕಡೆ ಮಂದಿ, ಎಲ್ಲೆ ಬೇಕಲ್ಲೆ, ಏನ್ ಬೇಕದನ್ನ ಯಾವಾಗ ಬೇಕ ಆವಾಗ ಒಗದಿರತಾರಪಾ...
ತಿಮ್ಮಾ: ಅದನ್ನ ಹಸನ ಮಾಡಾಕ ಬರಬೇಕಡ ಇವಾ... ಅದರಿಂದ ಕಸದ ಮಾಫಿಯಾ ಅಂತೊಂದು ಐತ್ಯಂತ... ಅದನ್ನ ಬಗ್ಗ ಬಡಿಬಹುದು ನೋಡ!
ತಮ್ಮಾ: ಮಾತಾಡಿ ಬಗಿಹರಸಾಕ್ಕಾಗಲ್ಲ ಅದನ್ನ!
ತಿಮ್ಮಾ: ಸಾಧ್ಯ ಇಲ್ಲ, ಯಾಕಂದರ ಅವರಿಗ್ಯಾರಗೂ ಕನ್ನಡ ಬರಂಗಿಲ್ಲಪಾ. ಅವರ ಕನ್ನಡ ಬಿಟ್ಟು ಇಲ್ಲೆ ನಮ್ಮ ಮಗ್ಗಲ ರಾಜ್ಯದ ಬಾಷಾ ಅತೀ ಹಿಗ್ಗಿನಿಂದ ಆಡತಾರ...
ತಮ್ಮಾ: ಅಲ್ಲಿಂದ ಬಂದಾರೋ ಎನೋ... ಹಂಗಡ ಸುಲಭ ಶೌಚಾಲಯದ ಉಸ್ತವಾರಿನ ಹಿಂದಿ ಮಾತಾಡವರ ನಿಭಾಯಿಸ್ತಾರ, ಅವರ ಕನ್ನಡದ ಗಂಧಗಾಳಿ ಇಲ್ಲ!!
ತಿಮ್ಮಾ: ಒಟ್ಟನ್ಯಾಗ, ಬೆಂಗಳೂರ ಸಾಫ ಮಾಡುವರು ಇಲ್ಲಿಯವರಲ್ಲ ಅಂತಾತು.
ತಮ್ಮಾ: ಹಂಗೇನಿಲ್ಲ ದೇಶಕ್ಕ ಆಧಾರ ಹಂಚಿದ ನಂದನ ಬೆಂಗಳೂರ ನಾ ಸುಧಾರಿಸ್ತಿನಿ ಅಂದಾರ.
ತಿಮ್ಮಾ: ಆದರ 'ಅನಂತ'ರ ಮಾಯಾದ ಮಂದ, 'ಕೆ'ಲಾಸ ವಾಸಿಯಾಗಬಹುದೇನು?
-ಯಶವಂತ ಸರದೇಶಪಾಂಡೆ
khullamkhullabevubella@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

