ತೆಲಂಗಾಣ: ಆಯುತ ಚಂಡಿಯಾಗದಲ್ಲಿ ಅಗ್ನಿ ಅವಘಡ

ತೆಲಂಗಾಣದ ಮೇಧಕ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಆಯೋಜಿಸಿರುವ ಆಯುತ ಚಂಡಿಯಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಯಜ್ಞ ಶಾಲೆಯ 1 ಪೆಂಡಾಲ್ ನಲ್ಲಿ ಬೆಂಕಿ ಹೊತ್ತಿ ಉರಿದಿದೆ.
ಆಯುತ ಚಂಡಿಯಾಗದಲ್ಲಿ ಅಗ್ನಿ ಅವಘಡ
ಆಯುತ ಚಂಡಿಯಾಗದಲ್ಲಿ ಅಗ್ನಿ ಅವಘಡ
Updated on: 

ಹೈದರಾಬಾದ್: ತೆಲಂಗಾಣದ ಮೇಧಕ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಆಯೋಜಿಸಿರುವ ಆಯುತ ಚಂಡಿಯಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಯಜ್ಞ ಶಾಲೆಯ 1 ಪೆಂಡಾಲ್ ನಲ್ಲಿ ಬೆಂಕಿ ಹೊತ್ತಿ ಉರಿದಿದೆ.
ಅಗ್ನಿ ಅವಗಢ ಸಂಭವಿಸಿದ ಹಿನ್ನೆಲೆಯಲ್ಲಿ ಯಾಗಶಾಲೆಯಲ್ಲಿ ಕೆಲ ಸಮಯ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು. 4 ಅಗ್ನಿಶಾಮಕ ವಾಹನಗಳು ಅಗ್ನಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿಯನ್ನು ತಹಬದಿಗೆ ತರಲಾಗಿದೆ.
ಇಂದು ಆಯುತ ಚಂಡಿ ಯಾಗದ ಕೊನೆಯ ದಿನವಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾಗುವ ಕೆಲವೇ ಗಂಟೆಗಳ ಮುನ್ನ ಈ ಅವಘಡ ಸಂಭವಿಸಿದೆ.

ಬೆಂಕಿ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತೆಲಂಗಾಣ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com