ದೇಶ

ಪ್ರೇಮಿಯ ಮೇಲಿನ ಸಿಟ್ಟಿಗೆ ಹೋಟೆಲ್‍ಗೆ ಬೆಂಕಿ

ಪ್ರೇಮಿಯ ಮೇಲಿನ ಸಿಟ್ಟಿಗೆ ಹೋಟೆಲ್‍ಗೆ ಬೆಂಕಿ
ಸಾಂದರ್ಭಿಕ ಚಿತ್ರ
Published On :

ಲಂಡನ್: ಇಚ್ಛೆಯರಿತ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ.. ಎಂಬ ವಚನದ ಸಾಲನ್ನು ಇಂಗ್ಲೆಂಡ್‍ನ ಯುವತಿಯೊಬ್ಬಳು ಅಪಾರ್ಥ ಮಾಡಿಕೊಂಡಂತಿದೆ. ಇಚ್ಛೆಗೆ ವಿರುದಟಛಿ ನಡೆದು ಕೊಂಡ ಬಾಯ್ ಫ್ರೆಂಡ್‍ನ ಮೇಲಿನ ಕೋಪಕ್ಕೆ ಆತನಿದ್ದ ಹೋಟೆ-ಲ್‍ಗೇ ಕಿಚ್ಚು ಹಚ್ಚಿ ಜೈಲು ಪಾಲಾಗಿರುವ ಘಟನೆ ಹಾವರ್ ಫೋರ್ಡ್ ವೆಸ್ಟ್ ನಲ್ಲಿ ನಡೆದಿದೆ.

ಅಂಥಾದ್ದೇನಾಯ್ತು?: ಜಾರ್ಜಿನಾ ಟ್ರಾಂಟರ್ (26) ಎಂಬಾಕೆ ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಗೆಳತಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದಾಳೆ. ಅಲ್ಲಿ ಆಕೆ ಮದ್ಯಪಾನ ಮಾಡಿದ್ದೇ ಅಲ್ಲದೆ ಕೊಕೇನ್ ಕೂಡ ಸೇವಿಸಿದ್ದಾಳೆ. ಮತ್ತಿನಲ್ಲಿದ್ದ ಪ್ರಿಯತಮೆ ಸಂಜೆ ಪ್ರಿಯಕರನೊಂದಿಗೆ ಪ್ರೀಮಿಯರ್ ಇನ್ ಹೋಟೆಲ್ ಗೆ ಹೋಗಿದ್ದಾಳೆ.

ಕುಡಿದ ಅಮಲಿನಲ್ಲಿ ಅಲ್ಲಿ ಯದ್ವಾತದ್ವಾ ವರ್ತನೆ ತೋರಿದಾಗ, ಬೇಸತ್ತ ಪ್ರಿಯಕರ ಆಕೆಯನ್ನು ಹೋಟೆಲ್ ರೂಮ್ ನಿಂದ ಹೊರ ತಳ್ಳಿದ್ದಾನೆ. ಹೋಟೆಲ್ ರೂಮ್ ನ ಎದುರಲ್ಲಿ ಹಾಗೂ ಹೋಟೆಲ್ ಆವರಣದಲ್ಲಿ ಅಸಭ್ಯವಾಗಿ ಕೂಗಾಡತೊಡಗಿದಾಗ ಹೋಟೆಲ್ ಸಿಬ್ಬಂದಿಗಳು ಪೊಲೀಸ್‍ಗೆ ದೂರು ನೀಡಿದ್ದಾರೆ.

ಪೊಸರು ಪರಿಸ್ಥಿತಿ ಶಾಂತಗೊಳಿಸಿ ಆಕೆಯನ್ನು ತಾಯಿಯ ಮನೆಗೆ ಬಿಟ್ಟುಹೊರಟಿದ್ದಾರೆ ಇಷ್ಟಕ್ಕೇ ಸುಖಾಂತ್ಯ ಕಾಣಬೇಕಿದ್ದ ಎಪಿಸೋಡು, ರಾತ್ರಿಯ ಹೊತ್ತಿಗೆ ತಿರುವು ಪಡೆದುಕೊಂಡಿದೆ.
ತಾಯಿಯ ಮನೆಯಿಂದ ಕಾರ್‍ನಲ್ಲಿ ವಾಪಸ್ ಬಂದ ಟ್ರಾಂಟರ್, ಇಡೀ ಹೋಟೆಲ್ ಗೆ ಬೆಂಕಿ ಹಚ್ಚಿದ್ದಾಳೆ ಕನಿಷ್ಠ ನೂರು ಮಂದಿ ಇದ್ದ ಇದರಿಂದ ಅತಿಥಿಗಳು ಗಾಬರಿಬಿದ್ದು ಓಡಿ ಹೊರಬಂದಿದ್ದಾರೆ.

ಬಾಯ್ ಫ್ರೆಂಡ್ ಮೇಲಿನ ಸಿಟ್ಟಿಗೆ ಹೋಟೆಲ್ ಗೆ ಬೆಂಕಿ ಹಚ್ಚಿದ್ದಕ್ಕೆ, ನೂರಾರು ಮಂದಿಯ ಪ್ರಾಣದೊಂದಿಗೆ ಚೆಲ್ಲಾಟ ಆಡಿದ್ದಕ್ಕೆ ತಾಯಿಯ ಒಪ್ಪಿಗೆ ಇಲ್ಲದೆ ಕಾರ್ ತಂದಿದ್ದಕ್ಕೆ ಈಗ ಟ್ಯಾಂಟರ್ ಜೈಲು ಸೇರಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.