ವೋಕ್ಸ್ ವ್ಯಾಗನ್‍ಗೆ ನೋಟಿಸ್

ವೋಕ್ಸ್ ವ್ಯಾಗನ್ ಕಾರುಗಳಲ್ಲಿ ಹೊಗೆ ಹೊರಸೂಸುವ ಪ್ರಮಾಣಕ್ಕೆ ಸಂಬಂಧಿಸಿದಂತೆ ದೋಷ ಕಂಡುಬಂದಿರುವುದರಿಂದ ಕೇಂದ್ರ ಸರ್ಕಾರ...
ವೋಕ್ಸ್ ವ್ಯಾಗನ್ (ಸಂಗ್ರಹ ಚಿತ್ರ)
ವೋಕ್ಸ್ ವ್ಯಾಗನ್ (ಸಂಗ್ರಹ ಚಿತ್ರ)

ನವದೆಹಲಿ: ವೋಕ್ಸ್ ವ್ಯಾಗನ್ ಕಾರುಗಳಲ್ಲಿ ಹೊಗೆ ಹೊರಸೂಸುವ ಪ್ರಮಾಣಕ್ಕೆ ಸಂಬಂಧಿಸಿದಂತೆ ದೋಷ ಕಂಡುಬಂದಿರುವುದರಿಂದ ಕೇಂದ್ರ ಸರ್ಕಾರ ಬುಧವಾರ ನೋಟಿಸ್ ಜಾರಿ ಮಾಡಿದೆ.

ಆಟೋಮೋಟಿವ್ ರೀಸರ್ಚ್ ಅಥಾರಿಟಿ ಆಫ್ ಇಂಡಿಯಾ (ಎಆರ್‍ಎಐ) ವೋಕ್ಸ್ ವ್ಯಾಗನ್ ಕಂಪನಿಯ ಜೆಟ್ಟ, ಆಡಿಎ4 ಮತ್ತು ವೆಂಟೊ ಮಾದರಿಗಳಲ್ಲಿನ ಹೊಗೆ ಹೊರಸೂಸುವಿಕೆ ಪ್ರಮಾಣವನ್ನು ತಪಾಸಣೆ ನಡೆಸಿದೆ. ಪ್ರಯೋಗಾಲಯದಲ್ಲಿನ ಪ್ರಮಾಣ ಆನ್‍ರೋಡ್ ಮೇಲೆ ಹೊಗೆ ಹೊರಸೂಸುವ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂದು ಎಆರ್‍ಎಐ ಹೇಳಿದೆ.

ಹೀಗಾಗಿ ವೋಕ್ಸ್ ವ್ಯಾಗನ್ ಗ್ರೂಪ್ ಆಫ್ ಕಂಪನೀಸ್‍ಗೆ ನೋಟಿಸ್ ಜಾರಿ ಮಾಡಿದ್ದು ಕಾರುಗಳಲ್ಲಿ ದೋಷದ ಕುರಿತು ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com