ರು.22.5 ಕೋಟಿ ಹಣ ಕದ್ದು ಪರಾರಿಯಾಗಿದ್ದ ಚಾಲಕನ ಬಂಧನ

ರು.22.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ವ್ಯಾನ್ ಚಾಲಕನನ್ನು ದೆಹಲಿ ಪೊಲೀಸರು...
ದೆಹಲಿ ಪೊಲೀಸರು ಪತ್ತೆ ಹಚ್ಚಿದ ಹಣ ಸಾಗಿಸುತ್ತಿದ್ದ ವಾಹನ
ದೆಹಲಿ ಪೊಲೀಸರು ಪತ್ತೆ ಹಚ್ಚಿದ ಹಣ ಸಾಗಿಸುತ್ತಿದ್ದ ವಾಹನ
Updated on: 
ನವದೆಹಲಿ: ರು.22.5 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ವ್ಯಾನ್ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹಣವನ್ನು ಸಾಗಿಸುವ ವಾಹನದಲ್ಲಿ ಚಾಲಕನಾಗಿದ್ದ ಪ್ರದೀಪ್ ಶುಕ್ಲಾ ನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ರು.11. ಕೋಟಿಯನ್ನು ವಶಪಡಿಸಿಕೊಂಡಿದ್ದಾರೆ. 
ಹಣ ಸಾಗಿಸುವ ವಾಹನದಲ್ಲಿ ಪ್ರದೀಪ್ ಶುಕ್ಲಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವಾಹನದಿಂದ ಭದ್ರತಾ ಸಿಬ್ಬಂದಿ ಕೆಳಗಿಳಿದಾಗ ಪ್ರದೀಪ್ ಶುಕ್ಲಾ ವಾಹನದೊಂದಿಗೆ ಪರಾರಿಯಾಗಿಲು ಯತ್ನಿಸಿದ್ದನು. ವಿಷಯ ತಿಳಿದ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ವಾಹನವನ್ನು ಪತ್ತೆ ಹಚ್ಚಿದ್ದರು.
ಆದರೆ, ವಾಹನವನ್ನು ಬಿಟ್ಟು ಹಣದ ಜೊತೆಗೆ ಚಾಲಕ ಪರಾರಿಯಾಗಿದ್ದ. ಎಲ್ಲಾ ಗಡಿ ಭಾಗಗಳಲ್ಲಿ ದೆಹಲಿ ಪೊಲೀಸರು ಕಟ್ಟೆಚ್ಚರ ನೀಡಿ, ಚಾಲಕ ಪತ್ತೆಗಾಗಿ ಬಲೆ ಬೀಸಿದ್ದರು. ಅಷ್ಟರಲ್ಲೇ, ಚಾಲಕ ಕದ್ದ ಹಣದಲ್ಲಿ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿದ್ದನು. ಈಗ ಪ್ರದೀಪ್ ಶುಕ್ಲಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com