ಒಡಿಶಾ ಸಿಎಂ ಕಚೇರಿಯಲ್ಲಿ ಬೆಂಕಿ ಅವಘಡ: ಶಾರ್ಟ್ ಸರ್ಕ್ಯೂಟ್ ಶಂಕೆ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಬುಧವಾರ ತಿಳಿದುಬಂದಿದೆ...
ಒಡಿಶಾ ಸಿಎಂ ಕಚೇರಿಯಲ್ಲಿ ಬೆಂಕಿ ಅವಘಡ (ಫೋಟೋ ಕೃಪೆ: ಒಡಿಶಾ ಸನ್ ಟೈಮ್ಸ್)
ಒಡಿಶಾ ಸಿಎಂ ಕಚೇರಿಯಲ್ಲಿ ಬೆಂಕಿ ಅವಘಡ (ಫೋಟೋ ಕೃಪೆ: ಒಡಿಶಾ ಸನ್ ಟೈಮ್ಸ್)
Updated on: 

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಬುಧವಾರ ತಿಳಿದುಬಂದಿದೆ.

ಇಂದು ಮಧ್ಯಾಹ್ನ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯವಾಗಲಿ, ನಷ್ಟಗಳಾಗಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಸಣ್ಣ ಬೆಂಕಿ ಅವಘಡವಾಗಿದ್ದು, ಯಾವುದೇ ನಷ್ಟ, ಗಾಯಗಳಾಗಲಿ ಸಂಭವಿಸಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರಬಹುದು ಎಂದು ಅಗ್ನಿ ಶಾಮಕ ದಳ ಅಧಿಕಾರಿ ಮನೋರಂಜನ್ ರಾವತ್ ಅವರು ಹೇಳಿದ್ದಾರೆ.

ಟಿವಿಗೆ ಅಳವಡಿಸಲಾಗಿದ್ದ ಸೆಟ್ ಟಾಪ್ ಬಾಕ್ಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿತ್ತು. ನಂತರ ಬೆಂಕಿ ಅವಘಡ ಸಂಭವಿಸಿತ್ತು. ಘಟನೆ ವೇಳೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು. ಮರದ ಟೇಬಲ್, ಸೆಟ್ ಟಾಪ್ ಬಾಕ್ಸ್ ಮತ್ತು ಟಿವಿ ಹಾನಿಗೊಳಗಾಗಿದೆ. ಹೊರತು ಕಡತಗಳು ಅಥವಾ ಇನ್ನಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ ಎಂದು ಶಾಸಕ ದಬಾಸಿಸ್ ನಾಯಕ್ ಅವರು ಹೇಳಿದ್ದಾರೆ.

ಇನ್ನು ಘಟನೆ ನಡೆದಾಗ ಮುಖ್ಯಮಂತ್ರಿಗಳು ಕಚೇರಿಯಲ್ಲಿರಲಿಲ್ಲ. ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದು, ಇಂದು ಆಗಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಜಂಟಿ ಆಯುಕ್ತ ವೈ.ಬಿ ಕುರಾನಿಯಾ ಮತ್ತು ಡಿಜಿ. ಕೆ.ಬಿ ಸಿಂಗ್ ಅವರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com