ಕೆಲಸ ಹುಡುಕಿಕೋ ಎಂದಿದ್ದಕ್ಕೆ ತಾಯಿಯನ್ನೆ ಜೀವಂತ ಸುಟ್ಟ ಮಗ

ಅಡ್ಡಾದಿಡ್ಡಿ ತಿರುಗಾಡಿಕೊಂಡಿದ್ದ ಮಗನಿಗೆ ಕೆಲಸ ಹುಡುಕಿಕೋ ಎಂದು ಬುದ್ಧಿವಾದ ಹೇಳಿದ ತಾಯಿಯನ್ನೇ ಜೀವಂತ ಸುಟ್ಟು ಹಾಕಿರುವ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ...
ಬೆಂಕಿ
ಬೆಂಕಿ
Updated on: 

ಚೆನ್ನೈ: ಅಡ್ಡಾದಿಡ್ಡಿ ತಿರುಗಾಡಿಕೊಂಡಿದ್ದ ಮಗನಿಗೆ ಕೆಲಸ ಹುಡುಕಿಕೋ ಎಂದು ಬುದ್ಧಿವಾದ ಹೇಳಿದ ತಾಯಿಯನ್ನೇ ಜೀವಂತ ಸುಟ್ಟು ಹಾಕಿರುವ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.

ಶಾಲೆಯಿಂದ ಡ್ರಾಪ್ಔಟ್ ಆಗಿದ್ದ ಮಗನಿಗೆ ತಾಯಿ ಕೆಲಸಕ್ಕೆ ಹೋಗುವಂತೆ ಪಿಡಿಸುತ್ತಿದ್ದಳಂತೆ ಹೀಗಾಗಿ ತಾನೇ ತಾಯಿಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮೃತ ವೇಲುತೈ ಕೆಲಸಕ್ಕೆ ಹೋಗದಿದ್ದ ತನ್ನ ಎರಡನೇ ಮಗನಿಗೆ ಬೈದಿದ್ದಾಳೆ. ಇದರಿಂದ ಕೋಪಗೊಂಡ ಮಗ ಅಡುಗೆ ಮನೆಯಲ್ಲಿ ಅಡುಗೆಯಲ್ಲಿ ತೊಡಿಗಿದ್ದ ತಾಯಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಜ್ವಾಲೆಯಿಂದಾಗಿ ವೇಲುತೈ ಕಿರುಚಾಡಿದ್ದರಿಂದ ಮನೆಯ ಹೊರಗಡೆ ಇದ್ದ ಪತಿ ಹಾಗೂ ಕಿರಿಯ ಮಗ ಹೊಳಗೆ ಬಂದು ಬೆಂಕಿ ಹಾರಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಬೆಂಕಿಯ ಜ್ವಾಲೆಯಿಂದ ತೀವ್ರತರದಲ್ಲಿ ಸುಟ್ಟ ಹೋಗಿದ್ದ ವೇತುಲೈ ಭಾನುವಾರ ರಾತ್ರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

6ನೇ ತರಗತಿಯಿಂದ ಡ್ರಾಪ್ ಔಟ್ ಆಗಿದ್ದ 17 ವರ್ಷದ ಬಾಲಕನನ್ನು ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಚೆಂಗಲ್ ಪೆಟ್ಟು ಸರ್ಕಾರಿ ಬಾಲಕರ ವೀಕ್ಷಣೆಗೆ ಬಿಡಲಾಗಿದೆ. ಬಾಲಕಿ ಗಾಂಜಾ ಮತ್ತು ಕುಡಿತಕ್ಕೆ ದಾಸನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com