ಸುಮಾರು 1.51 ಕೋಟಿ ರು. ಕಪ್ಪುಹಣವನ್ನು ಬಿಳಿಯಾಗಿಸಿದ ಆರೋಪದ ಮೇಲೆ ಮೈಕಲ್ ನನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಟ್ಟು 17 ಲಕ್ಷ ರು.ಹಣವನ್ನು ಜಪ್ತಿ ಮಾಡಲಾಗಿದೆ. ಮೈಕಲ್ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಎಸ್ ಬಿಎಂ ಬ್ಯಾಂಕಿಗೆ ಸೇರಿದ ಸುಮಾರು 1.51 ಕೋಟಿ ರು.ಹಣವನ್ನು ಹಳೆಯ ನೋಟುಗಳನ್ನು ಪಡೆದು ಬದಲಾಯಿಸಿಕೊಟ್ಟಿದ್ದರು ಎಂಬ ಆರೋಪವಿದೆ.