ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ: 18ಕ್ಕೇರಿದ ಸಾವಿನ ಸಂಖ್ಯೆ, 1 ನಾಪತ್ತೆ

ಮಹಾರಾಷ್ಟ್ರ ವಾದ್ರಾದಲ್ಲಿನ ಸೇನಾ ಶಸ್ತ್ರಾಗಾರದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಾವಿನ ಸಂಖ್ಯೆ 18ಕ್ಕೇರಿರುವುದಾಗಿ ತಿಳಿದುಬಂದಿದೆ...
ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ
ಸೇನಾ ಶಸ್ತ್ರಾಗಾರದಲ್ಲಿ ಬೆಂಕಿ
Updated on: 

ನಾಗ್ಪುರ: ಮಹಾರಾಷ್ಟ್ರ ವಾದ್ರಾದಲ್ಲಿನ ಸೇನಾ ಶಸ್ತ್ರಾಗಾರದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಾವಿನ ಸಂಖ್ಯೆ 18ಕ್ಕೇರಿರುವುದಾಗಿ ತಿಳಿದುಬಂದಿದೆ.

ಸೇನಾ ಶಸ್ತ್ರಾಗಾರದಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇದರಂತೆ ಸೇನಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು.

ಬೆಂಕಿ ಅನಾಹುತದ ಪರಿಣಾಮ ನಿನ್ನೆ 16 ಯೋಧರು ಮೃತಪಟ್ಟಿದ್ದರು, ಅಲ್ಲದೆ, ಹಲವರಿಗೆ ಗಂಭೀರವಾಗಿ ಗಾಯಗೊಂಡಿದ್ದವು. ಇದೀಗ ಕಾರ್ಯಾಚರಣೆ ವೇಳೆ ಮತ್ತಿಬ್ಬರು ಯೋಧರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಓರ್ವ ಯೋಧ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಇನ್ನು ಇದೀಗ ಸಿಕ್ಕಿರುವ ಇಬ್ಬರು ಯೋಧರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ. ಆದರೆ, ಶಸ್ತ್ರಾಗಾರದ ಬಳಿಯಿದ್ದ ನೀರಿನ ಟ್ಯಾಂಕ್ ಬಳಿ ಮೃತದೇಹಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬೆಂಕಿಯ ಧಗೆ ತಾಳಲಾರದೆ ಯೋಧರು ನೀರಿನ ಟ್ಯಾಂಕ್ ಬಳಿ ಬಂದಿರಬಹುದು ಎಂದು ಊಹಿಸಲಾಗಿದೆ.

ಇನ್ನು ಸ್ಥಳದಲ್ಲಿ ಇಂದೂ ಕೂಡ ಕಾರ್ಯಾಚರಣೆ ಮುಂದುರೆಯಲಿದೆ ಎಂದು ಹೇಳಲಾಗುತ್ತಿದ್ದು, ಘಟನೆಗೆ ಈ ವರೆಗೂ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಸ್ಥಳೀಯರು ಹೇಳಿರುವ ಪ್ರಕಾರ ಘಟನೆ ವೇಳೆ ಭಾರೀ ಸ್ಫೋಟದ ಸದ್ದು ಕೇಳಿಬಂದಿತ್ತು. ಬೆಂಕಿಯಿಂದಾಗಿ ಸ್ಥಳಾದಲ್ಲಿದ್ದ ಸಾಕಷ್ಟು ಮನೆಗಳು ಹಾಗೂ ಕಟ್ಟಡಗಳು ನಾಶಗೊಂಡಿದೆ ಎಂದು ಹೇಳಿಕೊಂಡಿದ್ದಾರೆ.

ಘಟನೆ ಕುರಿತಂತೆ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಮಾತನಾಡಿ, ಅಗ್ನಿ ಅನಾಹುತದಲ್ಲಿ  ಲೆಫ್ಟಿನೆಂಟ್ ಕರ್ನಲ್ ಆರ್.ಎಸ್ ಪವಾರ್ ಮತ್ತು ಮೇಜರ್ ಮೋಹನ್,ಕೆ ಹಾಗೂ 13 ಯೋಧರು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ. 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ವಾದ್ರಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com