ನವದೆಹಲಿ: ಮಹಾರಾಷ್ಟ್ರದ ಶಾಲೆಯೊಂದು ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ ಕೊಹ್ಲಿ ಅವರ ಗರ್ಲ್ ಫ್ರೆಂಡ್ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳುವ ಮೂಲಕ ವಿವಾದ ಸೃಷ್ಟಿಸಿದೆ.
ಮುಂಬೈನ ಭಿವಂಡಿಯ ಚಾಚಾ ನೆಹರು ಹಿಂದಿ ಫ್ರೌಡಶಾಲೆ ಕಳೆದ ಗುರುವಾರ ನಡೆಸಿದ ವೈಯಕ್ತಿಕ ತರಬೇತಿ(ಪಿಟಿ) ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಗರ್ಲ್ಫ್ರೆಂಡ್ ಯಾರು? ಎಂಬ ಪ್ರಶ್ನೆ ಕೇಳಲಾಗಿದೆ.
ಬಿ ವಿಭಾಗದ ಪ್ರಶ್ನೆ ಪತ್ರಿಕೆಯಲ್ಲಿ ಕಾಣಿಸಿಕೊಂಡ ಈ ಪ್ರಶ್ನೆ ವಿದ್ಯಾರ್ಥಿಗಳಿಗೆ ಆಶ್ಚರ್ಯ ನೀಡಿದೆ. ಮೂರು ಉತ್ತರವನ್ನು ನೀಡಿ, ಬಿಟ್ಟ ಸ್ಥಳ ತುಂಬುವಂತೆ ಸೂಚಿಸಲಾಗಿದೆ. ಪ್ರಿಯಾಂಕ, ಅನುಷ್ಕಾ, ದೀಪಿಕಾ ಎಂಬ ಮೂರು ಉತ್ತರವನ್ನು ನೀಡಲಾಗಿತ್ತು.
ಕ್ರಿಕೆಟ್ ಮತ್ತು ಕೊಹ್ಲಿ ಬಗ್ಗೆ ತಿಳಿದಿದ್ದವರು ಸುಲಭವಾಗಿ ಈ ಪ್ರಶ್ನೆಗೆ ಉತ್ತರಿಸಿದರು. ಈ ರೀತಿ ಹಾಸ್ಯಾಸ್ಪದ ಪ್ರಶ್ನೆಯನ್ನು ಏಕೆ ಕೇಳಲಾಗಿದೆ ಎನ್ನುವುದು ತನಿಖೆಯ ನಂತರ ತಿಳಿಯಬೇಕಿದೆ.