

ನವದೆಹಲಿ: ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನಡೆಸಿರುವ ಸೀಮಿತ ದಾಳಿಗೆ ಬಾಂಗ್ಲಾದೇಶ ಬೆಂಬಲ ಘೋಷಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನ ಸಹ ಬೆಂಬಲ ಘೋಷಿಸಿದೆ.
ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿರುವುದು ಸೂಕ್ತವಾಗಿದೆ. ಭಯೋತ್ಪಾದನೆಗೆ ತಕ್ಕ ಉತ್ತರ ನೀಡುವ ಸಮಯ ಬಂದಿದ್ದು, ಭಾರತ ತನ್ನ ರಕ್ಷಣೆಗಾಗಿ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನ ಹೇಳಿದೆ.
ಇನ್ನು ಸಾರ್ಕ್ ಸಮ್ಮೇಳನದ ಬಗ್ಗೆಯೂ ಮಾತನಾಡಿರುವ ಅಫ್ಘಾನಿಸ್ತಾನ, ಭಯೋತ್ಪಾದನೆಯ ನಡುವೆಯೇ ಸಾರ್ಕ್ ಸಮ್ಮೇಳನ ನಡೆಯುವುದು ಸೂಕ್ತವಲ್ಲ. ಇಂತಹ ವಾತಾವರಣದಲ್ಲಿ ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸದೇ ಇರುವುದೇ ಒಳಿತು ಎಂದು ಅಫ್ಘಾನಿಸ್ತಾನದ ರಾಯಭಾರಿ ತಿಳಿಸಿದ್ದಾರೆ.