

ಮುಂಬೈ: ಐದು ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಳ್ಳುವವರೆಗೂ ಬಜೆಟ್ ನಡೆಸಲು ಕೇಂದ್ರಕ್ಕೆ ರಾಷ್ಟ್ರಪತಿಗಳು ಅನುಮತಿ ನೀಡಬಾರದು ಎಂದು ಶಿವಸೇನೆ ಮುಖ್ಯಸ್ಧ ಉದ್ಧವ್ ಠಾಕ್ರೆಯವರು ಬುಧವಾರ ಹೇಳಿದ್ದಾರೆ.
ಜಿಲ್ಲಾ ಪಕ್ಷ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಅವರು, ಚುನಾವಣೆ ಹಾಗೂ ಕೇಂದ್ರದ ಬಜೆಟ್ ಕುರಿತಂತೆ ಶಿವಸೇನೆ ಸಂಸದರು ಶೀಘ್ರದಲ್ಲಿಯೇ ರಾಷ್ಟ್ರಪತಿಗಳನ್ನು ಭೇಟಿಯಾಗಲಿದ್ದಾರೆ. ಕೇಂದ್ರದ ಬಜೆಟ್ ಮೂಲಕ ಬಿಜೆಪಿ ಜನರನ್ನು ಹಾದಿತಪ್ಪಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಬಜೆಟ್ ಏಕೆ ಮಂಡನೆ ಮಾಡಬೇಕು. ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರ ಬಜೆಟ್ ಮಂಡನೆ ಮಾಡುವುದು ಸರಿಯಲ್ಲ. ಚುನಾವಣೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಕೇಂದ್ರದ ಬಜೆಟ್'ಗೆ ರಾಷ್ಟ್ರಪತಿಗಳು ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.