ದೇಶ

ಭಾರತ ಚೀನಾಗಿಂತ ಹೆಚ್ಚು ಭ್ರಷ್ಟ, ಪಾಕಿಸ್ತಾನಕ್ಕಿಂತ ಉತ್ತಮ: ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿ

ಭಾರತ ಚೀನಾಗಿಂತ ಹೆಚ್ಚು ಭ್ರಷ್ಟ, ಪಾಕಿಸ್ತಾನಕ್ಕಿಂತ ಉತ್ತಮ: ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿ
ಸಂಗ್ರಹ ಚಿತ್ರ
Published On :
ನವದೆಹಲಿ: ಚೀನಾ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೆಚ್ಚಿನ ಭ್ರಷ್ಟಾಚಾರವಿದೆ ಎಂದು ವರದಿಯೊಂದು ಹೇಳಿದೆ.
ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 81ನೇ ಸ್ಥಾನ ಲಭಿಸಿದ್ದು, ಚೀನಾ ಭಾರತಕ್ಕಿಂತ ಮುಂದಿದ್ದು, ಚೀನಾ 77ನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು 180  ರಾಷ್ಟ್ರಗಳನ್ನು ಕಡಿಮೆ ಭ್ರಷ್ಟಾಚಾರದ ದೇಶಗಳು ಎಂದು ಪಟ್ಟಿ ಮಾಡಲಾಗಿದ್ದು, ಪ್ರತಿಯೊಂದು ದೇಶಕ್ಕೂ 0 ಯಿಂದ 100 ಅಂಕಗಳನ್ನು ನೀಡಲಾಗಿದ್ದು, ಶೂನ್ಯ ಅಂಕ ಪಡೆದ ದೇಶ ಅತ್ಯಂತ ಭ್ರಷ್ಟದೇಶವೆಂದೂ, 100 ಅಂಕ ಪಡೆದ  ದೇಶವನ್ನು ಅತ್ಯಂತ ಭ್ರಷ್ಟಾಚಾರ ರಹಿತ ದೇಶವೆಂದೂ ಪರಿಗಣಿಸಲಾಗುತ್ತದೆ.
ಅದರಂತೆ ಪಟ್ಟಿಯಲ್ಲಿ ನ್ಯೂಜಿಲೆಂಡ್ ದೇಶ ಅಗ್ರ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಒಟ್ಟು 89 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಡೆನ್ಮಾರ್ಕ್ ನಂತರದ ಸ್ಥಾನದಲ್ಲಿದ್ದು, ಸಿರಿಯಾ, ದಕ್ಷಿಣ ಸೂಡಾನ್ ಮತ್ತು ಸೊಮಾಲಿಯ ಕೊನೆಯ  ಸ್ಥಾನದಲ್ಲಿದ್ದು, ಈ ಪೈಕಿ ಪಟ್ಟಿಯಲ್ಲಿ 9 ಅಂಕಗಳನ್ನು ಪಡೆದಿರುವ ಸೊಮಾಲಿಯ ಕೊನೆಯ ಸ್ಥಾನದಲ್ಲಿದೆ. ಇನ್ನುಳಿದಂತೆ ಬಾಂಗ್ಲಾದೇಶ (143ನೇ ಸ್ಥಾನ), ಮ್ಯಾನ್ಮಾರ್ (130ನೇ ಸ್ಥಾನ), ಶ್ರೀಲಂಕಾ (91ನೇ ಸ್ಥಾನ), ದಕ್ಷಿಣ ಆಫ್ರಿಕಾ  (71ನೇ ಸ್ಥಾನ), ಬ್ರೆಜಿಲ್ 96 ಮತ್ತು ರಷ್ಯಾ 135ನೇ ಸ್ಥಾನದಲ್ಲಿವೆ.
ಇನ್ನು ಭೂತಾನ್ ರಾಷ್ಟ್ರ ಭಾರತಕ್ಕಿಂತ ಮುಂದಿದ್ದು,  ಭೂತಾನ್ 26ನೇ ಸ್ಥಾನದಲ್ಲಿದೆ ಎಂದು ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.