2017-18 ಜಿಡಿಪಿ ಬೆಳವಣಿಗೆ 6.5%, ಹಿಂದಿನ ನಾಲ್ಕು ವರ್ಷಗಳಲ್ಲೇ ಅತಿಕಡಿಮೆ: ಸಿಎಸ್ಒ

2017-18 ರ ಜಿಡಿಪಿ ಬೆಳವಣಿಗೆ ಶೇ.6.5 ರಷ್ಟಕ್ಕೆ ಇಳಿಕೆಯಾಗಲಿದ್ದು, ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಜಿಡಿಪಿ ಬೆಳವಣಿಗೆ ಇದಾಗಿರಲಿದೆ ಎಂದು ಸಿಎಸ್ಒ ಹೇಳಿದೆ.
ಜಿಡಿಪಿ
ಜಿಡಿಪಿ
Updated on: 
ನವದೆಹಲಿ: 2017-18 ರ ಜಿಡಿಪಿ ಬೆಳವಣಿಗೆ ಶೇ.6.5 ರಷ್ಟಕ್ಕೆ ಇಳಿಕೆಯಾಗಲಿದ್ದು, ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಜಿಡಿಪಿ ಬೆಳವಣಿಗೆ ಇದಾಗಿರಲಿದೆ ಎಂದು ಸಿಎಸ್ಒ ಹೇಳಿದೆ. 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇದೇ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆಯಾಗಿದ್ದು, 2016-17 ರಲ್ಲಿ ಜಿಡಿಪಿ ಬೆಳವಣಿಗೆ ಶೇ.7.1 ರಷ್ಟಿತ್ತು. ಇದಕ್ಕೂ ಮುನ್ನ 2014-15 ರಲ್ಲಿ ಶೇ.7.5 ರಷ್ಟಿತ್ತು. 2017-18 ರಲ್ಲಿ ಶೇ.6.5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆ ಮಾಡಲಾಗುತ್ತಿದ್ದು, ನಾಲ್ಕು ವರ್ಷಗಳಲ್ಲೇ ಕಡಿಮೆ ಎಂದು ಕೇಂದ್ರ ಅಂಕಿಅಂಶ ಕಚೇರಿ ಹೇಳಿದೆ. 
2017-18 ರ ಜಿವಿಎ 6.6 ರಷ್ಟಿರಲಿದೆ ಎಂಬ ನಿರೀಕ್ಷೆ ಇತ್ತು, ಆದರೆ ಈಗ ಶೇ.6.1 ರಷ್ಟಿರಲಿದೆ ಎಂದು ಅಂದಾಜಿಸಲಾಗುತ್ತಿದೆ, ಇನ್ನು ಕೃಷಿ ಹಾಗೂ ಮೀನುಗಾರಿಕಾ ಚಟುವಟಿಕೆಗಳೂ ಸಹ ಶೇ.4.9 ರಷ್ಟಿಂದ ಶೇ.2.1 ರಷ್ಟಕ್ಕೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com