13ನೇ ದಿನವೂ ಮುಂದುವರೆದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಸತತವಾಗಿ ಬೆಲೆ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇದೀಗ 13ನೇ ದಿನವೂ ಬೆಲೆ ಇಳಿಕೆ ಮುಂದುವರೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ; ಸತತವಾಗಿ ಬೆಲೆ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇದೀಗ 13ನೇ ದಿನವೂ ಬೆಲೆ ಇಳಿಕೆ ಮುಂದುವರೆದಿದೆ. 
ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 15 ಪೈಸೆ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 
ಪ್ರಸ್ತುತ ರಾಷ್ಟ್ರ ರಾಜಧಾನಿ ನವದೆಹಲಿ, ಕೋಲ್ಕತಾ, ಮುಂಬೈ ಹಾಗೂ ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.76.58 ಪೈಸೆ, ರೂ.79.25 ಪೈಸೆ, ರೂ.84.41 ಪೈಸೆ ಮತ್ತು ರೂ.79.48 ಪೈಸೆ ಇದೆ. 
ಇನ್ನು 1 ಲೀಟರ್ ಡೀಸೆಲ್ ಬೆಲೆ ದೆಹಲಿಯಲ್ಲಿ ರೂ.67.95, ಕೋಲ್ಕತಾ ದಲ್ಲಿ ರೂ.70.50, ಮುಂಬೈನಲ್ಲಿ ರೂ. 72.35 ಹಾಗೂ ಚೆನ್ನೈನಲ್ಲಿ ರೂ.71.73 ಇದೆ. 
ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಭಾರತೀಯ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ. ಇದರಂತೆ ನಿತ್ಯ ತೈಲ ಬೆರೆಯಲ್ಲಿ ಪರಿಷ್ಕರಣೆಯಾಗುತ್ತಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com