ದೇಶ

ಭಾರತವನ್ನು ಮೂವರು ವ್ಯಕ್ತಿಗಳು ನಡೆಸಲಾಗದು, ಆದಷ್ಟು ಬೇಗ ವಿಪಕ್ಷಗಳು ಒಂದಾಗಲಿವೆ: ರಾಹುಲ್ ಗಾಂಧಿ

ಭಾರತವನ್ನು ಮೂವರು ವ್ಯಕ್ತಿಗಳು ನಡೆಸಲಾಗದು, ಆದಷ್ಟು ಬೇಗ ವಿಪಕ್ಷಗಳು ಒಂದಾಗಲಿವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
ನವದೆಹಲಿ: ನಮ್ಮ ದೇಶದವರು ಬಿಜೆಪಿ-ಆರ್ಎಸ್ಎಸ್ ಗೆ ಗುಲಾಮರಾಗಿದ್ದಾರೆ. ಕೇವಲ ಮೂವರು ಮಾತ್ರ ಭಾರತವನ್ನು ನಡೆಸಲಾಗುವುದಿಲ್ಲ. ಮುಂದಿನ ಆರರಿಂದ ಒಂದು ವರ್ಷದೊಳಗೆ ವಿಪಕ್ಷಗಳು ಒಂದಾಗಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
ಒಬಿಸಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ರಾಷ್ಟ್ರೀಯ ಸ್ವಯಂಸೇವಾ ಸಂಘದ ಅಧ್ಯಕ್ಷ ಮೋಹನ್ ಭಾಗವತ್ ಶೀಘ್ರದಲ್ಲೇ ಭಾರತದ ಶಕ್ತಿಯನ್ನು ನೋಡಲಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ಸಮುದಾಯದ ಶಕ್ತಿ ಎನೆಂಬುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು. 
ಬಿಜೆಪಿ ಮತ್ತು ಆರ್ಎಸ್ಎಸ್ ನ ಮೂವರು ನಾಯಕರಿಗೆ ನಮ್ಮ ರಾಷ್ಟ್ರದವರು ಗುಲಾಮರಾಗಿದ್ದಾರೆ. ದೇಶದಲ್ಲಿರುವ ಸಮಸ್ತ ವಿಪಕ್ಷಗಳು ಮುಂದಿನ ಆರರಿಂದ ಒಂದು ವರ್ಷದಲ್ಲಿ ಒಂದಾಗಲಿದ್ದು ಭಾರತದ ಶಕ್ತಿ ಎನೆಂಬುದು ಈ ಮೂವರಿಗೂ ಗೊತ್ತಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಭಾರತವನ್ನು ಆ ಮೂವರು ಮಾತ್ರ ನಡೆಸಲು ಆಗುವುದಿಲ್ಲ. ದೇಶದ ಜನರು ಭಾರತವನ್ನು ನಡೆಸುತ್ತಾರೆ ಎಂಬುದು ಅವರಿಗೆ ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.