ಈ ಎಲ್ಲ ಬೆಳವಣಿಗೆಗಳ ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿ, ಪಂದಳ ರಾಜಮನೆತನ, ದೇಗುಲದ ಮುಖ್ಯ ಅರ್ಚಕರು, ಅಯ್ಯಪ್ಪ ಸೇವಾ ಸಮಾಜ, ಯೋಗ ಕ್ಷೇಮ ಸಮಾಜ ಹಾಗೂ ಪ್ರತಿಭಟನೆ ನಡೆಸುತ್ತಿರುವ ನಾನಾ ಸಂಘಟನೆಗಳ ಪ್ರಮುಖರ ಜತೆ ಮಾತುಕತೆ ನಡೆಸಿದೆ. ರಾಜಮನೆತನ, ತಂತ್ರಿಗಳು ಮತ್ತು ದೇವಸ್ವಂ ಮಂಡಳಿಯ ಅಧ್ಯಕ್ಷ ಎ. ಪದ್ಮಕುಮಾರ್ ನಡುವೆ ಸಹಮತ ಮೂಡದೇ ಇದ್ದುದರಿಂದ ಮಾತುಕತೆ ವಿಫಲವಾಯಿತು.