ದೇಶ

ಸಿಗದ ಜನರ ಸಹಾಯ, ಚಿಂದಿ ಆಯುತ್ತಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪೊಲೀಸ್ ಇನ್ಸ್ಪೆಕ್ಟರ್!

ಸಿಗದ ಜನರ ಸಹಾಯ, ಚಿಂದಿ ಆಯುತ್ತಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪೊಲೀಸ್ ಇನ್ಸ್ಪೆಕ್ಟರ್!
ಸಿಗದ ಜನರ ಸಹಾಯ, ಚಿಂದಿ ಆಯುತ್ತಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪೊಲೀಸ್ ಇನ್ಸ್ಪೆಕ್ಟರ್!
Published On :

ಚೆನ್ನೈ: ಚಿಂದಿ ಆಯುತ್ತಿದ್ದ 60 ವರ್ಷದ ಮಹಿಳೆಯ ಅಂತ್ಯಸಂಸ್ಕಾರಕ್ಕಾಗಿ ಆಕೆಯ ಇಬ್ಬರು ಸಹೋದರಿಯರು ಗೋಗರೆದರೂ ಸಹ ಸಾರ್ವಜನಿಕರಿಂದ ಸಹಾಯ ದೊರೆಯದೇ, ಪೊಲೀಸ್ ಇನ್ಸ್ಪೆಕ್ಟರ್ ಸಹಾಯಕ್ಕೆ ನಿಂತ ಘಟನೆ ಚೆನ್ನೈ ನ ಒಟ್ಟೇರಿಯಲ್ಲಿ ನಡೆದಿದೆ. 

ಮೃತ ಮಹಿಳೆ ಪ್ರಭಾವತಿ ಹಾಗೂ ಆಕೆಯ ಇಬ್ಬರು ಸಹೋದರಿಯರು ಒಟ್ಟೇರಿ ಹೌಸಿಂಗ್ ಬೋರ್ಡ್ ನ ಬಳಿ ಇರುವ ಎಸ್ ಎಂ ನಗರದ ಪ್ಲಾಟ್ ಫಾರ್ಮ್ ನಲ್ಲಿ ಜೀವಿಸುತ್ತಿದ್ದರು. ಪ್ರಭಾವತಿ ಮೃತಪಟ್ಟಿದ್ದು, ಸೂಕ್ತ ಅಂತ್ಯಸಂಸ್ಕಾರಕ್ಕಾಗಿ ಆಕೆಯ ಸಹೋದರಿಯರು ಸಾರ್ವಜನಿಕರ ಸಹಾಯಕ್ಕಾಗಿ ಗೋಗರೆಯುತ್ತಿದ್ದರು. ಆದರೆ ಯಾರೊಬ್ಬರೂ ಸಹ ಸಾಹಯಕ್ಕೆ ಮುಂದಾಗದೇ ಸುಮ್ಮನೆ ನೋಡುತ್ತಿದ್ದರು.

"ಘಟನೆಯ ಬಗ್ಗೆ ನನಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ನಾನು ಅರೆನಗ್ನ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಹಾಗೂ ಸುಮ್ಮನೆ ನೋಡುತ್ತಿದ್ದ ಪುರುಷರ ದೃಶ್ಯ ಕಂಡು ಕೋಪಗೊಂಡೆ ಎನ್ನುತ್ತಾರೆ ಸೆಕ್ರೆಟೇರಿಯೆಟ್ ಕಾಲೋನಿಯ ಇನ್ಸ್ಪೆಕ್ಟರ್ ರಾಜೇಶ್ವರಿ. 

ನನ್ನ ವಾಹನದಲ್ಲಿ ಸೀರೆ ಇತ್ತು, ಅದನ್ನೇ ಶವಕ್ಕೆ ಹೊದಿಸಿದೆ. ಇದನ್ನು ಗಮನಿಸಿದ ಕೆಲವರು ಆಕೆ ಚಿಂತಿ ಆಯುವ ಮಹಿಳೆ ಕೊರೋನಾ ಸೋಂಕಿದ್ದರೆ? ಎಂದು ನನ್ನನ್ನು ತಡೆಯಲು ಯತ್ನಿಸಿದರು. ಅವರೆಲ್ಲರನ್ನೂ ನಿರ್ಲಕ್ಷಿಸಿ ಸಾಬೂನು ಹಾಗೂ ಇನ್ನಿತರ ಮುನ್ನೆಚ್ಚರಿಕಾ ಉಪಕರಣಗಳನ್ನು ತೆಗೆದುಕೊಂಡು ಸಂಸ್ಕಾರಕ್ಕೆ ಅನುವು ಮಾಡಲಾಯಿತು. ಮೃತ ಮಹಿಳೆಯರ ಸಹೋದರಿಯರು ಸೂಕ್ತ ಅಂತ್ಯಸಂಸ್ಕಾರಕ್ಕೆ ಸಹಾಯವನ್ನು ಕೋರಿದರು. ಬಳಿಕ ಒಟ್ಟೇರಿಯ ಸ್ಮಶಾನದಲ್ಲಿ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಯಿತು" ಎಂದು ಇನ್ಸ್ಪೆಕ್ಟರ್ ರಾಜೇಶ್ವರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.