ಕೊನೆ ಉಸಿರಿರುವವರೆಗೆ ಗಲಭೆಗಳು ನಡೆಯಲು ಬಿಡುವುದಿಲ್ಲ’: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಎಂದಿಗೂ ಅನ್ಯಾಯಕ್ಕೆ ತಲೆ ಬಾಗಿಲ್ಲ ಮತ್ತು ಅನ್ಯಾಯವನ್ನು ಬಂಗಾಳ ಎಂದಿಗೂ ಮಾಡುವುದಿಲ್ಲ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on: 

ಸುಜಾಪುರ: ಬಂಗಾಳ ಎಂದಿಗೂ ಅನ್ಯಾಯಕ್ಕೆ ತಲೆ ಬಾಗಿಲ್ಲ ಮತ್ತು ಅನ್ಯಾಯವನ್ನು ಬಂಗಾಳ ಎಂದಿಗೂ ಮಾಡುವುದಿಲ್ಲ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

‘ನಾನು ಮಾತನಾಡುವುದಕ್ಕೆ ಎಂದಿಗೂ ಹೆದರುವುದಿಲ್ಲ. ಈ ನೆಲದಲ್ಲಿ ಗಲಭೆಗಳು ನಡೆಯಲು ಎಂದಿಗೂ ಬಿಡುವುದೂ ಇಲ್ಲ. ಯಾರೊಬ್ಬರೂ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಿದರೆನಾವು ಮತ್ತೆ ಹೋರಾಡುತ್ತೇವೆ.’ಎಂದು ಅವರು ಹೇಳಿದ್ದಾರೆ.

ಮಾಲ್ಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಬಿಜೆಪಿ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ. ನಿಮ್ಮನ್ನು ಹೆದರಿಸಲು ಗಡಿ ಭದ್ರತಾ ಪಡೆಗಳು ನಿಮ್ಮ ಹಳ್ಳಿಗಳಿಗೆ ಬಂದರೆ ಕಾನೂನು ಸುವ್ಯವಸ್ಥೆ ನಿಮಗೆ ಸಂಬಂಧಿಸಿದ್ದಲ್ಲ. ರಾಜ್ಯ ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿ ಎಂದು ಸ್ಥಳೀಯರಿಗೆ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com