ಎಚ್ಚರ!: ಚಲಿಸುತ್ತಿದ್ದ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿ ಮುಂಬೈನಲ್ಲಿ 26 ವರ್ಷದ ಶಿಕ್ಷಕಿ ಸಾವು

ಮುಂಬೈನ ಶಾಲೆವೊಂದರ ಲಿಫ್ಟ್‌ ಬಾಗಿಲಿನ ನಡುವೆ ಸಿಲುಕಿ 26 ವರ್ಷದ ಶಿಕ್ಷಕಿ ಮೃತಪಟ್ಟಿದ್ದಾರೆ. ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.
ಮೃತ ಶಿಕ್ಷಕಿ ಜೆನೆಲ್ ಫೆರ್ನಾಂಡಿಸ್
ಮೃತ ಶಿಕ್ಷಕಿ ಜೆನೆಲ್ ಫೆರ್ನಾಂಡಿಸ್
Updated on: 

ಮುಂಬೈ: ಮುಂಬೈನ ಶಾಲೆವೊಂದರ ಲಿಫ್ಟ್‌ ಬಾಗಿಲಿನ ನಡುವೆ ಸಿಲುಕಿ 26 ವರ್ಷದ ಶಿಕ್ಷಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.

ಜೆನೆಲ್ ಫೆರ್ನಾಂಡಿಸ್ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಲ್ಲಿ ಕಾಯುತ್ತಿದ್ದರು. ಈ ವೇಳೆ ಲಿಫ್ಟ್‌ಗೆ ಪ್ರವೇಶಿಸುತ್ತಿದ್ದ ಕೂಡಲೇ ಬಾಗಿಲು ಮುಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಆಕೆ ಲಿಫ್ಟ್ ಅನ್ನು ಪ್ರವೇಶಿಸಿದಾಗ, ಶೀಘ್ರದಲ್ಲೇ ಲಿಫ್ಟ್ ಬಾಗಿಲು ಮುಚ್ಚಿದೆ ಮತ್ತು ಲಿಫ್ಟ್ ಚಲಿಸಲು ಪ್ರಾರಂಭಿಸಿದೆ. ಆಕೆ ಎರಡು ಬಾಗಿಲಿನ ನಡುವೆ ಸಿಕ್ಕಿಕೊಂಡಿದ್ದರು' ಎಂದು ವಲಯ 11ರ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಹೇಳಿದರು.

ಇದನ್ನು ಕಂಡು ಶಾಲಾ ಸಿಬ್ಬಂದಿ ಕೂಡಲೇ ಆಕೆಯ ನೆರವಿಗೆ ಧಾವಿಸಿದರು ಮತ್ತು ಆಕೆಯನ್ನು ಹೊರಗೆ ಎಳೆದರು. ಆದರೆ, ಆಕೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

'ಪ್ರಾಥಮಿಕ ತನಿಖೆಯ ಸಮಯದಲ್ಲಿ ನಾವು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿದ್ದೇವೆ. ಯಾವುದೇ ಅನುಮಾನ ಕಂಡುಬಂದರೆ, ನಾವು ಅದರಂತೆ ತನಿಖೆ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com