ತಾಯಿ-ಮಗಳು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲೇ ಹೆಚ್ಚುವರಿ ಕೆಲಸದ ನೆಪವೊಡ್ಡಿ ಮಗಳ ಮೇಲೆ ಅತ್ಯಾಚಾರ!

ಘಾಜಿಯಾಬಾದ್ ಜಿಲ್ಲೆಯ ಲಿಂಕ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಘಾಜಿಯಾಬಾದ್: ಜಿಲ್ಲೆಯ ಲಿಂಕ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಖಾನೆಯೊಂದರಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಘಟನೆ ಆಗಸ್ಟ್ 28 ರಂದು ನಡೆದಿದ್ದು, ಬುಧವಾರ ಸಂಜೆ ಸಂತ್ರಸ್ತೆ ತನ್ನ ತಾಯಿಗೆ ತನಗಾದ ಕಷ್ಟವನ್ನು ವಿವರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಗೆ ತೆರಳಿ ಮೂವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿಗಳನ್ನು ಲಕ್ಕಿ, ಸಂಜಯ್ ಮತ್ತು ರಾಜೇಂದ್ರ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಬಹಿರಂಗ ಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಸಂಸ್ರಸ್ತೆಗೆ ಬೆದರಿಕೆ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಹೆಚ್ಚುವರಿ ಸಮಯದ ಕೆಲಸದ ನೆಪದಲ್ಲಿ ಮಹಿಳೆಯನ್ನು ಸಾಹಿಬಾಬಾದ್ ಸೈಟ್-4 ಕೈಗಾರಿಕಾ ಪ್ರದೇಶದ ಕಾರ್ಖಾನೆಗೆ ಕರೆಸಿಕೊಳ್ಳಲಾಗಿದೆ. ಆಕೆಯ ತಾಯಿ ಕೂಡ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಘಟನೆ ನಡೆದ ದಿನ ಆಕೆ ರಜೆಯ ಮೇಲೆ ಊರಿಗೆ ತೆರಳಿದ್ದರು ಎಂದು ಅವರು ಹೇಳಿದರು.

ಎಫ್‌ಐಆರ್ ದಾಖಲಾದ ಕೆಲವೇ ಗಂಟೆಗಳ ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಾಹಿಬಾಬಾದ್ ಡಿಎಸ್‌ಪಿ ಸ್ವತಂತ್ರ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಸಂಜಯ್ ಎಂಬಾತನ ಮೊಬೈಲ್ ಬಳಸಿ ರಾಜೇಂದ್ರ ನನಗೆ ಕರೆ ಮಾಡಿದ್ದ. ನಾನು ಕಾರ್ಖಾನೆಯನ್ನು ತಲುಪಿದಾಗ ಅಲ್ಲಿ ಮಹಿಳಾ ಕೆಲಸಗಾರರು ಯಾರೂ ಇಲ್ಲದಿರುವುದು ಕಂಡುಬಂತು. ನಾನು ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಹೆಚ್ಚುವರಿ ಸಮಯ ಕೆಲಸ ಮಾಡಿದರೆ ನಾನು ಸ್ವಲ್ಪ ಹೆಚ್ಚುವರಿ ಹಣವನ್ನು ಪಡೆಯುತ್ತೇನೆ ಎಂದು ಅವರು ತಿಳಿಸಿದರು. ಅಷ್ಟರಲ್ಲಿ ಲಕ್ಕಿ ಎಂಬ ವ್ಯಕ್ತಿ ಟಿಫಿನ್‌ನೊಂದಿಗೆ ಅಲ್ಲಿಗೆ ಬಂದು ಊಟ ಮಾಡುವಂತೆ ಒತ್ತಾಯಿಸಿದರು. ಆಹಾರ ಸೇವಿಸಿದ ನಂತರ, ನನಗೆ ತಲೆತಿರುಗುವಿಕೆಯ ಅನುಭವವಾಯಿತು. ಪ್ರಜ್ಞೆತಪ್ಪಿದ ನನ್ನನ್ನು ಕಾರ್ಖಾನೆಯ ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಕಿ ವಿರುದ್ಧ ಐಪಿಸಿ ಸೆಕ್ಷನ್ 376, 506 ಮತ್ತು 328 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಸಂಜಯ್ ಮತ್ತು ರಾಜೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಸ್ಥಳೀಯ ನ್ಯಾಯಾಲಯವು ಜೈಲಿಗೆ ಕಳುಹಿಸಿದೆ  ಎಂದು ಡಿಎಸ್‌ಪಿ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com