BJP leader's son ties knot with Pakistani bride in unique cross-border wedding in Online
ಭಾರತ-ಪಾಕಿಸ್ತಾನ ಆನ್ಲೈನ್ ವಿವಾಹ

ಮತ್ತೊಂದು ಭಾರತ-ಪಾಕಿಸ್ತಾನ ಮದುವೆ; ಆನ್ಲೈನ್ ನಲ್ಲೇ Pak ಯುವತಿಯ ಮದುವೆಯಾದ ಬಿಜೆಪಿ ನಾಯಕನ ಪುತ್ರ! Video Viral

ವಧುವಿನ ಕುಟುಂಬದವರು ಲಾಹೋರ್‌ನಿಂದ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಅವರು ವಧು, ವರನ ಒಪ್ಪಿಗೆ ಪಡೆದು ನಿಕಾ ಮಾಡಿಸಿದರು.
Published on

ಪಾಟ್ನಾ: ಇತ್ತೀಚಿನ ದಿನಗಳಲ್ಲಿ cross-border Love Story ಮತ್ತು ಮದುವೆಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ವಿವಾಹ ಸೇರ್ಪಡೆಯಾಗಿದೆ.

ಹೌದು.. ಉತ್ತರ ಪ್ರದೇಶದ ಬಿಜೆಪಿ ಕಾರ್ಪೊರೇಟರ್ ಪುತ್ರ ಆನ್​ಲೈನ್​ನಲ್ಲೇ ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಜೌನ್​ಪುರ ಜಿಲ್ಲೆಯಲ್ಲಿ ವಿವಾಹ ನಡೆದಿದ್ದು, ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರ ವಿವಾಹ ಆನ್ಲೈನ್ ನಲ್ಲಿ ನೆರವೇರಿದೆ.

ಮೂಲಗಳ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವೀಸಾಗೆ ಅರ್ಜಿ ಸಲ್ಲಿಸಿದರೂ ಪಡೆಯಲು ಸಾಧ್ಯವಾಗಿಲ್ಲ. ಏತನ್ಮಧ್ಯೆ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ಒಳಗಾಗಿ ಐಸಿಯುಗೆ ದಾಖಲಿಸಲಾಗಿತ್ತು, ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ಆನ್‌ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದರು.

BJP leader's son ties knot with Pakistani bride in unique cross-border wedding in Online
ಆನ್‌ಲೈನ್‌ನಲ್ಲೇ ಮದುವೆ: ರಾಜಸ್ಥಾನದ ಪ್ರಿಯಕರನ್ನು ಭೇಟಿಯಾಗಲು ಗಡಿದಾಟಿ ಬಂದ ಪಾಕ್ ಯುವತಿ; ಗೂಢಚಾರಿಕೆ ಆರೋಪ!

ವಧುವಿನ ಕುಟುಂಬದವರು ಲಾಹೋರ್‌ನಿಂದ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಅವರು ವಧು, ವರನ ಒಪ್ಪಿಗೆ ಪಡೆದು ನಿಕಾ ಮಾಡಿಸಿದರು. ಹೈದರ್ ತನ್ನ ಹೆಂಡತಿಗೆ ಯಾವುದೇ ತೊಂದರೆಯಿಲ್ಲದೆ ಭಾರತೀಯ ವೀಸಾ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಬಿಜೆಪಿ ಎಂಎಲ್‌ಸಿ ಬ್ರಿಜೇಶ್ ಸಿಂಗ್ ಪ್ರಿಶು ಮತ್ತು ಇತರ ಅತಿಥಿಗಳು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು, ವರನ ಕುಟುಂಬವನ್ನು ಅಭಿನಂದಿಸಿದರು.

ಇನ್ನು ವರ ಹೈದರ್ ತನ್ನ ಪತ್ನಿ ಶೀಘ್ರದಲ್ಲೇ ಭಾರತೀಯ ವೀಸಾವನ್ನು ಯಾವುದೇ ತೊಂದರೆಗಳಿಲ್ಲದೆ ಸ್ವೀಕರಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com