

ನವದೆಹಲಿ: ಪಶ್ಚಿಮ ಏಷ್ಯಾ ಯುದ್ಧದಿಂದ ಉಂಟಾದ ಇಂಧನ ಅಡಚಣೆಗಳ ನಡುವೆಯೂ ದೇಶದ ಗ್ರಾಹಕರಿಗೆ ಪೈಪ್ಡ್ ನೈಸರ್ಗಿಕ ಅನಿಲ (PNG) ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ(LPG)ದ ಶೇ. 100 ರಷ್ಟು ಪೂರೈಕೆ ಮಾಡುವುದಾಗಿ ಬುಧವಾರ ಕೇಂದ್ರ ಸರ್ಕಾರ ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಇಂದು ಅಂತರ-ಸಚಿವಾಲಯದ ಬ್ರೀಫಿಂಗ್‌ನಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ(ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು, ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಸರ್ಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
"ನಿಮಗೆ ತಿಳಿದಿರುವಂತೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ, ಭಾರತದ ಇಂಧನ ಸರಬರಾಜು ಮೇಲೆ ಸಹ ಪರಿಣಾಮ ಬೀರಿದೆ. ಆದರೆ ಭಾರತ ಸರ್ಕಾರವು ಅನೇಕ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ, ಇದರಿಂದಾಗಿ PNG ಮತ್ತು LPG ಗ್ರಾಹಕರಿಗೆ ಆದ್ಯತೆ ನೀಡುವ ಮೂಲಕ ಶೇ. 100 ರಷ್ಟು ಪೂರೈಕೆಯನ್ನು ಖಚಿತಪಡಿಸಲಾಗಿದೆ. ಇದರ ಹೊರತಾಗಿ, CNG ಸಾಗಣೆಯನ್ನು ಸಹ ಶೇ. 100 ರಷ್ಟು ಖಚಿತಪಡಿಸಲಾಗಿದೆ" ಎಂದು ಶರ್ಮಾ ತಿಳಿಸಿದರು.
ಸರ್ಕಾರದ ಕ್ರಮಗಳನ್ನು ಬೆಂಬಲಿಸಲು, ದೇಶೀಯ ಸಂಸ್ಕರಣಾಗಾರಗಳು LPG ಉತ್ಪಾದನೆಯನ್ನು ಹೆಚ್ಚಿಸಿದವು. ಆದರೆ ಬೇಡಿಕೆಯನ್ನು ನಿರ್ವಹಿಸಲು ಸರ್ಕಾರವು ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 25 ದಿನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ಹೆಚ್ಚಿಸಿತು ಎಂದು ಅವರು ಹೇಳಿದ್ದಾರೆ.
Advertisement