ಇರಾನ್-ಅಮೆರಿಕ ನಡುವೆ ಭಾರತ ಸಮರ್ಥ್ಯ ಮಧ್ಯವರ್ತಿ ಎಂದ ರಷ್ಯಾ ವಿದೇಶಾಂಗ ಸಚಿವ; ಪಾಕಿಸ್ತಾನ ಬಗ್ಗೆ ಹೇಳಿದ್ದೇನು?

ನಿನ್ನೆಯಿಂದ ಆರಂಭವಾಗಿರುವ ಎರಡು ದಿನಗಳ ಬ್ರಿಕ್ಸ್(BRICS) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಲಾವ್ರೊವ್ ಅವರು, ಭಾರತದ "ವಿಶಾಲ ರಾಜತಾಂತ್ರಿಕ ಅನುಭವ ಮತ್ತು ಅಂತರರಾಷ್ಟ್ರೀಯ ಸ್ಥಾನಮಾನ"ವನ್ನು ಒತ್ತಿ ಹೇಳಿದರು.
India can play long-term mediator role: Russian FM on Iran-US conflict
ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್
Updated on

ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತವು ಸಮರ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಶುಕ್ರವಾರ ಹೇಳಿದ್ದಾರೆ.

ನಿನ್ನೆಯಿಂದ ಆರಂಭವಾಗಿರುವ ಎರಡು ದಿನಗಳ ಬ್ರಿಕ್ಸ್(BRICS) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಲಾವ್ರೊವ್ ಅವರು, ಭಾರತದ "ವಿಶಾಲ ರಾಜತಾಂತ್ರಿಕ ಅನುಭವ ಮತ್ತು ಅಂತರರಾಷ್ಟ್ರೀಯ ಸ್ಥಾನಮಾನ"ವನ್ನು ಒತ್ತಿ ಹೇಳಿದರು.

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಘದ ಬಗ್ಗೆ ಮಾತುಕತೆಯನ್ನು ಸುಗಮಗೊಳಿಸುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಪ್ರದೇಶದಲ್ಲಿ ದೀರ್ಘಕಾಲೀನ ಅಸ್ಥಿರತೆಯನ್ನು ತಡೆಗಟ್ಟಲು ಭಾರತವು ವಿಶಾಲವಾದ ರಾಜತಾಂತ್ರಿಕ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು.

India can play long-term mediator role: Russian FM on Iran-US conflict
ಅಮೆರಿಕ ಪರ ನಿಲ್ಲುವ ಪಾಕಿಸ್ತಾನಕ್ಕೆ ಟೆಹ್ರಾನ್-ವಾಷಿಂಗ್ಟನ್ ನಡುವೆ ಮಧ್ಯಸ್ಥಿಕೆ ವಹಿಸಲು ಯೋಗ್ಯತೆಯೇ ಇಲ್ಲ: ಇರಾನ್‌

ಇಂದು ಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, "ತುರ್ತು ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗೆ ಪಾಕಿಸ್ತಾನ ಸಹಾಯ ಮಾಡುತ್ತಿದೆ. ಆದರೆ ಅವರು ಇರಾನ್ ಮತ್ತು ಅದರ ಅರಬ್ ಸ್ನೇಹಿತರ ನಡುವೆ ದೀರ್ಘಕಾಲೀನ ಮಧ್ಯವರ್ತಿಯನ್ನು ಬಯಸಿದರೆ, ಭಾರತವು ತನ್ನ ವಿಶಾಲ ರಾಜತಾಂತ್ರಿಕ ಅನುಭವವನ್ನು ಪರಿಗಣಿಸಿ ಈ ಪಾತ್ರವನ್ನು ನಿರ್ವಹಿಸಬಹುದು" ಎಂದು ಹೇಳಿದರು.

ಭಾರತ ಪ್ರಸ್ತುತ ಬ್ರಿಕ್ಸ್ ಅಧ್ಯಕ್ಷರಾಗಿ ಮತ್ತು ಪ್ರಾದೇಶಿಕ ಸ್ಥಿರತೆಯಲ್ಲಿ ನೇರ ಆಸಕ್ತಿ ಹೊಂದಿರುವ ಪ್ರಮುಖ ಇಂಧನ ಗ್ರಾಹಕನಾಗಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗೆ ಸಹಾಯ ಮಾಡಬಹುದು ಎಂದು ಹೇಳಿದರು.

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಬ್ರೆಜಿಲ್‌ನ ಮೌರೊ ವಿಯೆರಾ ಮತ್ತು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಸಂಬಂಧಗಳ ಸಚಿವ ಓಜಿ ಲಮೋಲಾ ಅವರು ಬುಧವಾರವೇ (ಮೇ 13) ದೆಹಲಿಗೆ ಆಗಮಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com