ಈ ಸಲ ಯೋಗಿ ಆದಿತ್ಯನಾಥ್ CM ಅಭ್ಯರ್ಥಿ ಅಲ್ಲ? 'ಕಮಲ'ವೇ BJPಯ ಫೇಸ್: ಚರ್ಚೆಗೆ ಗ್ರಾಸವಾದ DCM ಮೌರ್ಯ ಹೇಳಿಕೆ!
ಇಂದು ಜೌನ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ, ಬಿಜೆಪಿ ತನ್ನ 'ಕಮಲ' ಚಿಹ್ನೆಯ ಅಡಿಯಲ್ಲಿ ಚುನಾವಣೆ ಎದುರಿಸುತ್ತದೆ ಮತ್ತು ಚುನಾವಣಾ ಫಲಿತಾಂಶದ ನಂತರ, ಆಯ್ಕೆಯಾದ ನೂತನ ಶಾಸಕರು ಒಮ್ಮತದ ಮೂಲಕ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.


