ಮೊದಲ ವಿದ್ಯುಚ್ಚಕ್ತಿ ವಿಮಾನ ಅಭಿವೃದ್ಧಿಪಡಿಸಿದ ಚೈನಾ

ವಿಶ್ವದ ಮೊದಲ ವಿದ್ಯುಚ್ಛಕ್ತಿ ವಿಮಾನವನ್ನು ಚೈನಾ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೀಜಿಂಗ್: ವಿಶ್ವದ ಮೊದಲ ವಿದ್ಯುಚ್ಛಕ್ತಿ ವಿಮಾನವನ್ನು ಚೈನಾ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.

'ಬಿಎಕ್ಸ್೧ಇ" ಹೆಸರಿನ ವಿಮಾನದ ರೆಕ್ಕೆ ೧೪.೫ ಮೀಟರ್ ಉದ್ದವಿದ್ದು, ೨೩೦ ಕೆಜಿ ತೂಕವನ್ನು ಹೊರಬಲ್ಲದ್ದಾಗಿದೆ. ಭೂಮಟ್ಟದಿಂದ ೩೦೦೦ ಮೀಟರ್ ಮೇಲೆ ಈ ವಿಮಾನ ಹಾರಬಲ್ಲುಡಾಗಿದೆ ಎಂದು ವರದಿ ಮಾಡಲಾಗಿದೆ.

ಈ ವಿಮಾನವನ್ನು ೨ ಘಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಗರಿಷ್ಠ ಘಂಟೆಗೆ ೧೬೦ ಕಿಮೀ ವೇಗದಲ್ಲಿ ೪೫ ನಿಮಿಷಗಳಿಂದ ೧ ಘಂಟೆ ಹಾರಾಟ ನಡೆಸಬಲ್ಲದ್ದಾಗಿದೆ.

ಶೆನ್ಯಾಂಗ್ ಏರೋಸ್ಪೇಸ್ ವಿಶ್ವವಿದ್ಯಾಲಯ ಮತ್ತು ಲಿಯೋನಿಂಗ್ ಜನರಲ್ ಏವಿಯೇಶನ್ ಅಕಾಡೆಮಿ ಈ ವಿಮಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಉತ್ಪಾದಕರ ಪ್ರಕಾರ ಈ ವಿಮಾನವನ್ನು ಪೈಲಟ್ಗಳ ತರಬೇತಿಗೆ, ಪ್ರವಾಸೋದ್ಯಮಕ್ಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಬಹುದಾಗಿದೆ.

ಈ ವಿಮಾನದ ಬೆಲೆ ಸುಮಾರು ಒಂದು ಮಿಲಿಯನ್ ಯಾನ್ (೧೬೩೦೦೦ ಡಾಲರ್ಗಳು).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com