ಟೀ ಶರ್ಟ್ ನಿಂದ ಮೊಬೈಲ್ ಚಾರ್ಜಿಂಗ್

ಟೀ ಶರ್ಟ್ ಮೇಲೆ ಫ್ಯಾಬ್ರಿಕ್ ಸೋಲಾರ್ ಪ್ಲೇಟ್ ಅಳವಡಿಸಿಕೊಂಡು ಮೊಬೈಲ್ ಗೆ ಸ್ಥಳದಲ್ಲಿಯೇ ವಿದ್ಯುತ್ ಸಂಪರ್ಕವಿಲ್ಲದೆ, ಚಾರ್ಜ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಟೀ ಶರ್ಟ್ ಮೇಲೆ ಫ್ಯಾಬ್ರಿಕ್ ಸೋಲಾರ್ ಪ್ಲೇಟ್ ಅಳವಡಿಸಿಕೊಂಡು ಮೊಬೈಲ್ ಗೆ ಸ್ಥಳದಲ್ಲಿಯೇ ವಿದ್ಯುತ್ ಸಂಪರ್ಕವಿಲ್ಲದೆ, ಚಾರ್ಜ್ ಮಾಡಿಕೊಳ್ಳುವಂತಹ ವಿನೂತನ ತಂತ್ರಜ್ಞಾನವನ್ನು ನಗರದ ಸಂಬೂಜ್ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಸಂಸ್ಥೆಯ ನೂತನ ತಂತ್ರಜ್ಞಾನ ಕುರಿತು ಸಂಸ್ಥೆಯ ಮಾಲಿಕ ಸಂತೋಷ್ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಫ್ಯಾಬ್ರಿಕ್ ಸೋಲಾರ ತಂತ್ರಜ್ಞಾನದಲ್ಲಿ ವಿನೂತನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.  ಜಲ ನಿರೋಧಕ ಪ್ಯಾನಲ್ ಸಿದ್ಧ ಪಡಿಸಿ, ಟೀ ಶರ್ಟ್ ಗಳಿಗೆ ಅಂಟಿಸಲಾಗುತ್ತದೆ.

ಸಾಮಾನ್ಯವಾಗಿ ಶರ್ಟ್ ಗಳಲ್ಲಿ ಬೆನ್ನಿನ ಭಾಗವೇ ಕಂಫರ್ಟ್ ಹೀಗಾಗಿ ಆ ಭಾಗದಲ್ಲಿಯೇ ಪ್ಯಾನಲ್ ಹಾಕಿ, ಸೂರ್ಯನ ಕಿರಣಗಳು ಸಂಗ್ರಹವಾಗುವ ಹಾಗೆ ಮಾಡಲಾಗುತ್ತದೆ.

ಅಲ್ಲಿಂದ ಪೊಲೋ ವಾಲ್ಟಿಕ್ ತಂತ್ರಜ್ಞಾನದಲ್ಲಿ ಸಂಗ್ರಹವಾದ ಸೋಲಾರ್ ವಿದ್ಯುತ್ ಮಾದರಿಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com