ಸ್ಯಾಮ್ ಸಂಗ್ ನೋಟ್ 7 ಬಳಕೆದಾರರಿಗೆ ಡಿಜಿಸಿಎ ರಿಲೀಫ್!

ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಮೊಬೈಲ್ ಬಳಕೆ ಮೇಲೆ ಹೇರಲಾಗಿದ್ದ ನಿಷೇಧವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಿಂಪಡೆದಿದೆ ಎಂದು ತಿಳಿದುಬಂದಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 (ಸಂಗ್ರಹ ಚಿತ್ರ)
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 (ಸಂಗ್ರಹ ಚಿತ್ರ)
Updated on

ನವದೆಹಲಿ: ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಮೊಬೈಲ್ ಬಳಕೆ ಮೇಲೆ ಹೇರಲಾಗಿದ್ದ ನಿಷೇಧವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಬ್ಯಾಟರಿಯಲ್ಲಿನ ತಾಂತ್ರಿಕದೋಷದಿಂದಾಗಿ ಮೊಬೈಲ್ ಸ್ಫೋಟಗೊಂಡ ಕುರಿತು ಸುದ್ದಿಗಳು ಹೊರಬಿದ್ದ ಬೆನ್ನಲ್ಲೇ ಕ್ರಮ ಕೈಗೊಂಡಿದ್ದ ಡಿಜಿಸಿಎ ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಬಳಕೆಗೆ ನಿಷೇಧ ಹೇರಿತ್ತು. ಹಬ್ಬದ ಹಿನ್ನಲೆಯಲ್ಲಿ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಸರಣಿಯ ಗ್ಯಾಲಕ್ಸಿ ನೋಟ್ 7 ಮೊಬೈಲ್ ನಲ್ಲಿ ತಾಂತ್ರಿಕ ದೋಷ  ಸರಿಪಡಿಸಿರುವ ಕುರಿತು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಡಿಜಿಸಿಎ ನಿಷೇಧ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

ಆದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು 2016 ಸೆಪ್ಟೆಂಬರ್ 15ರ ಬಳಿಕ ಖರೀದಿಸಿದ ನೋಟ್ 7 ಮೊಬೈಲ್ ಗಳಿಗೆ ಮಾತ್ರ ಬಳಸಬಹುದು ಎಂದು ಡಿಜಿಸಿಎ ಹೇಳಿದೆ. ಸೆಪ್ಟಂಬರ್ 15 ಕ್ಕಿಂತ ಮೊದಲು ಖರೀದಿ ಮಾಡಿದ ನೋಟ್-7 ಫೋನ್ ಗಳಲ್ಲಿ ಬ್ಯಾಟರಿ ದೋಷವಿದ್ದರೆ, ಚಾರ್ಜ್ ಆಗುವ ಸಂದರ್ಭದಲ್ಲಿ ಬಿಳಿ ಬಣ್ಣದ ಲೈಟ್ ಕಂಡು ಬಂದರೆ ವಿಮಾನಗಳಲ್ಲಿ ಕೊಂಡೊಯ್ಯಲು ನಿಷೇಧಿಸಲಾಗಿದೆ. ಸೆಪ್ಟಂಬರ್ 15 ರ ನಂತರದಲ್ಲಿ ಖರೀದಿಸಿದ, ಚಾರ್ಜ್ ಆಗುವಾಗ ಹಸಿರು ಲೈಟ್ ತೋರಿಸುವ ಗ್ಯಾಲಕ್ಸಿ ನೋಟ್-7 ಫೋನ್ ಗಳನ್ನು ವಿಮಾನದಲ್ಲಿ ಕೊಂಡೊಯ್ಯಲು ನಾಗರಿಕ  ವಿಮಾನಯಾನ ನಿರ್ದೇಶನಾಲಯ ಅವಕಾಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com