ಕಟಕ್ ಪರಿಣಾಮ: ಕಾನ್ಪುರ ಏಕದಿನ ಪಂದ್ಯಕ್ಕೆ ನೀರಿನ ಬಾಟಲಿ ನಿಷೇಧ

ಅ.5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡದೆ ಟಿ-20 ಪಂದ್ಯಾವಳಿ ವೇಳೆ ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿರುವ ಕಾನ್ಪುರ ಪೌಲೀಸರು ಗ್ರೀನ್ ಪಾರ್ಕ್ ಮೈದಾನದಲ್ಲಿ ಅ.11ರಂದು ನಡೆಯಲಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಕಾನ್ಪುರ: ಅ.5ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡದೆ ಟಿ-20 ಪಂದ್ಯಾವಳಿ ವೇಳೆ ಪ್ರೇಕ್ಷಕರು ನೀರಿನ ಬಾಟಲಿ ಎಸೆದು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿರುವ ಕಾನ್ಪುರ ಪೌಲೀಸರು ಗ್ರೀನ್ ಪಾರ್ಕ್ ಮೈದಾನದಲ್ಲಿ ಅ.11ರಂದು ನಡೆಯಲಿರುವ ಏಕದಿನ ಪಂದ್ಯಾವಳಿಗೆ ನೀರಿನ ಬಾಚಲಿ ಹಾಗೂ ಟಿಪಿನ್ ಬಾಕ್ಸ್ ಗಳಿಗೆ ಬುಧವಾರ ನಿಷೇಧ ಹೇರಿದ್ದಾರೆ.

ಸೋಮವಾರ ಕಟಕ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದಿಂದ ಸಿಟ್ಟಿಗೆದ್ದ ಪ್ರೇಕ್ಷಕರು ನೀರಿನ ಬಾಟಲಿಗಳನ್ನು ಮೈದಾನದತ್ತ ಎಸೆಯುವ ಮೂಲಕ ಅನುಚಿತವಾಗಿ ವರ್ತನೆ ತೋರಿದ್ದರು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತಲ್ಲದೇ, ಭಾರೀ ಅಡಚಣೆ ಉಂಟಾಗಿತ್ತು.

ಪ್ರೇಕ್ಷಕರ ವರ್ತನೆಯಿಂದಾಗಿ ಇದೀಗ ಕಾನ್ಪುರ ಕ್ರಿಕೆಟ್ ಆಡಳಿತ ಮಂಡಳಿಯವರು ಮುನ್ನೆಚ್ಚರಿಕೆ ವಹಿಸಿದ್ದು, ಪ್ರೇಕ್ಷಕರು ಬಿಸಾಡಿದ ಯಾವುದೇ ವಸ್ತುಗಳು ಮೈದಾನ ಮುಟ್ಟದಂತೆ 100 ಅಡಿ ಉದ್ದದ ನೆಟ್ ವ್ಯವಸ್ಥೆ ಮಾಡುವುದಾಗಿ ಹೇಳಿಕೊಂಡಿದೆ. ಅಲ್ಲದೆ, ಅಕ್ಟೋಬರ್ 11 ರಂದು ಕಾನ್ಪುರ ಮೈದಾನದಲ್ಲಿ ನಡೆಯುವ ಪಂದ್ಯಾವಳಿಗೆ “ವಾಟರ್ ಬಾಟಲ್, ಟಿಫಿನ್ಸ್ ಮತ್ತು ಯಾವುದೇ ರೀತಿಯ ಭೌತ ವಸ್ತುಗಳನ್ನು ಸ್ಟೇಡಿಯಂ ಒಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ” ಎಂದು ಕಾನ್ಪುರ ಪೊಲೀಸ್ ಎಸ್ ಎಸ್ ಎಸ್ಪಿ ಶಲಾಭ್ ಮಥುರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com