ಆಸೀಸ್‍ನಲ್ಲಿ ಎರಡು ಬದಲಾವಣೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಡೇವಿಡ್ ವಾರ್ನರ್ ಪತ್ನಿ ಇದೇ ವಾರಾಂತ್ಯಕ್ಕೆ ಮಗುವಿಗೆ ಜನ್ಮ ನೀಡಲಿರುವ ಹಿನ್ನೆಲೆಯಲ್ಲಿ ವಾರ್ನರ್ ರಜೆಯ ಮೇಲೆ ತೆರಳಿದ್ದಾರೆ.
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಡೇವಿಡ್ ವಾರ್ನರ್ ಪತ್ನಿ ಇದೇ ವಾರಾಂತ್ಯಕ್ಕೆ ಮಗುವಿಗೆ ಜನ್ಮ ನೀಡಲಿರುವ ಹಿನ್ನೆಲೆಯಲ್ಲಿ ವಾರ್ನರ್ ರಜೆಯ ಮೇಲೆ ತೆರಳಿದ್ದಾರೆ. ಹಾಗಾಗಿ, ಅವರ ಸ್ಥಾನಕ್ಕೆ ಮತ್ತೊಬ್ಬ ಬಲಿಷ್ಠ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರನ್ನು ಸರಣಿಯ 2ನೇ ಹಾಗೂ 3ನೇ ಪಂದ್ಯಗಳಿಗಾಗಿ ಸೇರ್ಪಡೆಗೊಳಿಸಲಾಗಿದೆ. ಆನಂತರದ ಪಂದ್ಯಗಳಿಗೆ ವಾರ್ನರ್ ತಂಡಕ್ಕೆ ಮರಳಿದರೆ, ಉಸ್ಮನ್ ಸ್ಥಾನ ತೆರವಾಗಲಿದೆ. ಇನ್ನು, ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಮಿಚೆಲ್ ಮಾರ್ಷ್ ಅವರಿಗೆ ಜ. 15ರಂದು ಬ್ರಿಸ್ಪೇನ್‍ನ ಗಬ್ಬಾದಲ್ಲಿ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನವನ್ನು ಮತ್ತೊಬ್ಬ ವೇಗಿ ಜಾನ್ ಹೇಸ್ಟಿಂಗ್ಸ್ ತುಂಬಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com